– ಯಾರಿಗೂ ವಿಷಯ ಹೇಳದಂತೆ ತಾಯಿಗೆ ಆಮಿಷ
ಬೆಂಗಳೂರು: 6 ವರ್ಷದ ಮೊಮ್ಮಗಳ (Grand Daughter) ಮೇಲೆ ಆಕೆಯ ತಾತನೇ (Grandfather) ಅತ್ಯಾಚಾರವೆಸಗಿರುವ (Rape) ಘಟನೆ ಹುಳಿಮಾವು (Hulimavu) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕೇಸ್ (POCSO Case) ದಾಖಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನ ಮೇಲೆ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ತಂದೆ ರಂಜಿತ್ ಕುಮಾರ್‌ನನ್ನು (35) ಬಂಧಿಸಲಾಗಿದೆ. ಆರೋಪಿಗಳು ಮೂಲತಃ ತಮಿಳುನಾಡು ಮೂಲದವರಾಗಿದ್ದು, ಪ್ರಸ್ತುತ ಹುಳಿಮಾವು ಸಮೀಪ ವೇಣುಗೋಪಾಲ್ ನಗರದ ನಿವಾಸಿಯಾಗಿದ್ದರು. ರಂಜಿತ್ ಕುಮಾರ್ ತಂದೆ ಚಕ್ರವರ್ತಿ (60), ಅತ್ತೆ ವಿಜಯಮ್ಮ (50) ಹಾಗೂ ಇಬ್ಬರು ಸಹೋದರರು ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ – ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ
ತಂದೆ ರಂಜಿತ್ ಕುಮಾರ್ ಅಜ್ಜಿ, ಚಿಕ್ಕಂಪ್ಪದಿರು ತಲೆ ಮರೆಸಿಕೊಳ್ಳಲು ಸಹಾಯ ಮಾಡಿದ್ದ ಎನ್ನಲಾಗಿದೆ. ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಯಾರಿಗೂ ಹೇಳಿದಂತೆ ತಾಯಿಯ ಬಳಿ ತಂದೆ, ಅತ್ತೆ, ಮಾವ ಹಾಗೂ ಚಿಕ್ಕಪ್ಪಂದಿರು ಆಮಿಷವೊಡ್ಡಿದ್ದಾರೆ. ಮನೆಯನ್ನು ಮೊಮ್ಮಗಳ ಹೆಸರಿಗೆ ಬರೆಯುತ್ತೇವೆ, ಚಿನ್ನದ ಒಡವೆ ಕೊಡಿಸುತ್ತೇವೆ, ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಧಮ್ಕಿ ಕೂಡ ಹಾಕಿದ್ದಾರೆ. ಬಳಿಕ ತಾಯಿ ಕೆಲಸಕ್ಕೆ ಹೊರಡುತ್ತೇನೆ ಎಂದು ಸಬೂಬು ಹೇಳಿ ಮನೆಯಿಂದ ಆಚೆಗೆ ಬಂದು ಅಕ್ಕಪಕ್ಕದವರ ಸಹಾಯ ಪಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಹುಳಿಮಾವು ಪೊಲೀಸ್ ಠಾಣೆಗೆ ಬಂದು ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸುಳ್ಳು ಅತ್ಯಾಚಾರ ಕೇಸ್ – ದೂರುದಾರೆ ಸೇರಿ 13 ಜನರಿಗೆ ಜೈಲು
ದೂರಿನ ಆಧಾರದಲ್ಲಿ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ. ಅತ್ಯಾಚಾರ ಆರೋಪಿ ಚಕ್ರವರ್ತಿ, ಅತ್ತೆ ವಿಜಯಮ್ಮ ಹಾಗೂ ಇಬ್ಬರು ಸಹೋದರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂತ್ರಸ್ತ ಬಾಲಕಿ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಹಾಲನ್ನು ಹಾಲಾಹಲ ಮಾಡಿದೆ: ಆರ್.ಅಶೋಕ್