ಚೆನ್ನೈ: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ (Rape) ಎಸಗಿದ ಆರೋಪದ ಮೇಲೆ ಮೂವರು ಅಪ್ರಾಪ್ತ (Minors) ಬಾಲಕರು ಸೇರಿ 6 ಮಂದಿಯನ್ನು ಬಂಧಿಸಿದ ಘಟನೆ ತಮಿಳುನಾಡಿನ (Tamil Nadu) ತಿರುಪ್ಪೂರ್ (Tiruppur) ಜಿಲ್ಲೆಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಒಳಗಾದ ಬಾಲಕಿಯರು 13 ಮತ್ತು 17 ವರ್ಷದವರಾಗಿದ್ದಾರೆ. 17 ವರ್ಷದ ಬಾಲಕಿ ಗರ್ಭಿಣಿಯಾದ ಬಳಿಕ ವಿಷಯ ಬೆಳಕಿಗೆ ಬಂದಿದೆ. 17ರ ಬಾಲಕಿ ಚಿಕ್ಕ ವಯಸ್ಸಿನಲ್ಲೇ ತನ್ನ ಪೋಷಕರನ್ನು ಕಳೆದುಕೊಂಡು ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದಳು. ಶಾಲೆಯನ್ನು ತೊರೆದು ಕೆಲಸಕ್ಕಾಗಿ ಹುಡುಕಾಡುತ್ತಿದ್ದಾಗ 15 ವರ್ಷದ ಬಾಲಕ ಆಕೆಯೊಂದಿಗೆ ಸ್ನೇಹವನ್ನು ಬೆಳೆಸಿದ್ದಾನೆ. ಬಳಿಕ ಕೆಲಸ ಕೊಡಿಸುವ ನೆಪದಲ್ಲಿ ಆಕೆಯನ್ನು ತನ್ನ ಸ್ನೇಹಿತರ ಬಳಿ ಕರೆದೊಯ್ದು ಸ್ನೇಹಿತರೊಂದಿಗೆ ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ. ಇದನ್ನೂ ಓದಿ: ಎಣ್ಣೆ ಸಾಲ ಕೊಡದಿದ್ದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ – ಆರೋಪಿ ಅರೆಸ್ಟ್
ಇದೇ ರೀತಿ ಹಲವು ಬಾರಿ ಅತ್ಯಾಚಾರ ಮಾಡಿದ್ದು, 17 ವರ್ಷದ ಬಾಲಕಿ ಜೊತೆ 13 ವರ್ಷದ ಬಾಲಕಿಯೂ ಹೋಗಿದ್ದ ಸಂದರ್ಭ ಆಕೆಯ ಮೇಲೂ ಅತ್ಯಾಚಾರವೆಸಗಿದ್ದಾರೆ. 17 ವರ್ಷದ ಬಾಲಕಿ ತನ್ನ ಋತುಚಕ್ರ ಸರಿಯಾಗಿ ಆಗುತ್ತಿಲ್ಲ ಎಂದು ತಿಳಿದು ಚಿಕ್ಕಮ್ಮನ ಬಳಿ ಅತ್ಯಾಚಾರದ ವಿಷಯ ಹೇಳಿದ್ದಾಳೆ. ವಿಷಯ ತಿಳಿದ ಆಕೆಯ ಚಿಕ್ಕಮ್ಮ ಉಡುಮಲೈಪೆಟ್ಟೈ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧ ರಾಘವೇಂದ್ರ ಷಡ್ಯಂತ್ರ – ಬಂಧಿಸುವಂತೆ ಈಶ್ವರಪ್ಪ ದೂರು
ಜಯ ಕಾಳೀಶ್ವರನ್, ಮಥನ್ ಕುಮಾರ್, ಬರಣಿ ಕುಮಾರ್ ಮತ್ತು ಇತರ ಮೂವರು ಬಾಲಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 6 ವರ್ಷ ಮೋದಿಯನ್ನು ಚುನಾವಣೆಯಿಂದ ನಿರ್ಬಂಧಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ