ಬೆಂಗಳೂರು: ಸ್ಯಾಂಡಲ್ ವುಡ್‌ನ ಖಳನಟ ಶೇಷಗಿರಿ ಬಸವರಾಜು (Sheshgiri Basavaraj) ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ಬಿರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ.
2014ರಲ್ಲಿ ಸಂತ್ರಸ್ತ ಮಹಿಳೆಯ ಪರಿಚಯವಾಗಿತ್ತು, ಪರಿಚಯ ಸ್ನೇಹಕ್ಕೆ ತಿರುಗಿತ್ತು. ಒಂದು ದಿನ ಮಹಿಳೆಗೆ ಪ್ರಜ್ಞೆ ತಪ್ಪುವ ಮಾತ್ರೆ ನೀಡಿ ಅತ್ಯಾಚಾರ ಮಾಡಲಾಗಿದೆ. ನಂತರ ವಿಡಿಯೋ ಫೋಟೋಗಳನ್ನು ತೆಗೆದುಕೊಂಡು ಬೆದರಿಕೆ ಹಾಕಲಾಗಿದೆ ಅಂತ ಮಹಿಳೆ ಶೇಷಗಿರಿ ವಿರುದ್ಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ (Subramanya Nagar Police Station) ದೂರು ನೀಡಿದ್ದರು. ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ – ಹೈಕೋರ್ಟ್‌ಗೆ 2,300 ಪುಟಗಳ ಅಂತಿಮ ವರದಿ ಸಲ್ಲಿಕೆ
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಸಂತ್ರಸ್ತ್ರ ಮಹಿಳೆಯ ವೈದ್ಯಕೀಯ ಪರೀಕ್ಷೆಯಲ್ಲಿ ದೈಹಿಕ ಸಂಪರ್ಕ ನಡೆದಿಲ್ಲ ಎಂದು ವರದಿ ಬಂದಿತ್ತು. ಬಳಿಕ ಆರೋಪದ ಬಗ್ಗೆ ಯಾವುದೇ ಸಾಕ್ಷಿಗಳು ಕೂಡ ಇರಲಿಲ್ಲ. ಹೀಗಾಗಿ ಈ ಪ್ರಕರಣ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದು, ಸಾಕ್ಷ್ಯಧಾರಗಳ ಕೊರತೆಯಿಂದ ಕೂಡಿದೆ ಎಂದು ಪೊಲೀಸರು ಬಿ-ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಇತ್ಯರ್ಥ ಆಗಿರೋ ಅತ್ಯಾಚಾರ ಪ್ರಕರಣದ ಲಿಸ್ಟ್ ಕೇಳಿದ ವಿದ್ಯಾರ್ಥಿನಿ – ತಡಬಡಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ