-ಸಂತ್ರಸ್ತೆಯಿಂದ ಪತಿ, ಸ್ವಾಮೀಜಿ ವಿರುದ್ಧ ದೂರು
ಮೈಸೂರು: ಗೃಹಿಣಿಯೊಬ್ಬರು ಸ್ವಾಮೀಜಿಯ ವಿರುದ್ಧ ಅತ್ಯಾಚಾರ ಯತ್ನ ಕೇಸ್ ದಾಖಲಿಸಿದ್ದಾರೆ.
ಪಾಂಡವಪುರ ಶ್ರೀ ಕ್ಷೇತ್ರ ತ್ರಿಧಾಮ ಆಶ್ರಮದ ವಿದ್ಯಾಹಂಸ ಭಾರತಿ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ. ಕುವೆಂಪು ನಗರದ ನಿವಾಸಿಯಿಂದ ದೂರು ದಾಖಲಾಗಿದೆ. ಚಾತುರ್ಯಾಮಾಸ ಪೂಜೆಗೆ ಎಂದು ಮನೆಗೆ ಬಂದಾಗ ಅತ್ಯಾಚಾರಕ್ಕೆ ಯತ್ನಸಿದ್ದಾನೆ. ಅಷ್ಟೇ ಅಲ್ಲದೇ ಸ್ವಾಮೀಜಿಯ ಈ ಕೃತ್ಯಕ್ಕೆ ಪತಿಯೇ ಸಹಕಾರ ಕೊಟ್ಟಿದ್ದಾನೆ ಎಂದು ದೂರಿನಲ್ಲಿ ಗೃಹಿಣಿ ಉಲ್ಲೇಖಿಸಿದ್ದಾರೆ.
Advertisement
Advertisement
ದೂರಿನಲ್ಲಿ ಏನಿದೆ?
ನನ್ನ ಪತಿ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ರಾಮಮಂದಿದಲ್ಲಿ ವಿದ್ಯಾಹಂಸ ಭಾರತಿ ಸ್ವಾಮೀಜಿ ಪರಿಚಯ ಇದ್ದಾರೆ. ಅವರು ಹೇಳಿದಂತೆ ಕೇಳಿದರೆ ನಮ್ಮ ಸಾಲವನ್ನೆಲ್ಲಾ ತೀರಿಸಿಕೊಳ್ಳಬಹುದು ಎಂದು ಹೇಳಿದನು. ಅದಕ್ಕೆ ನಾನು ನಿರಾಕರಿಸಿದೆ. ಮಂಗಳವಾರ ರಾತ್ರಿ ಸುಮಾರು 1 ಗಂಟೆಗೆ ಮನೆಗೆ ಬಂದು ಬೆಲ್ ಮಾಡಿದರು. ನಾನು ನನ್ನ ಪತಿ ಬಂದಿರಬೇಕು ಎಂದು ಬಾಗಿಲು ತೆಗೆದೆ. ಆದರೆ ನಮ್ಮ ಗಂಡನ ಜೊತೆ ಸ್ವಾಮೀಜಿ ಮತ್ತು ಆತನ ಚೇಲಾಗಳು ಸುಮಾರು 5 ಜನ ಏಕಾಏಕಿ ಮನೆಗೆ ನುಗ್ಗಿದರು.
Advertisement
ನಮ್ಮ ಪತಿ ಮತ್ತು ಸ್ವಾಮೀಜಿ ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಸ್ವಾಮೀಜಿ ನನ್ನ ಸೇವೆಗೆ ಬರುವುದಿಲ್ಲ ಎಂದು ನಿರಾಕರಿಸುತ್ತೀಯಾ ಎಂದು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ ರೂಮಿಗೆ ಎಳೆದುಕೊಂಡು ಹೋಗಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ನಾನು ದೇವಿ ಸ್ವರೂಪದವನು ನನ್ನ ಬೇಡಿಕೆಯನ್ನು ತಿರಸ್ಕರಿಸುತ್ತೀಯಾ ಎಂದು ಮೃಗನಂತೆ ವರ್ತಿಸಿದನು. ಇದಕ್ಕೆ ನನ್ನ ಪತಿ ಕುಮ್ಮಕ್ಕು ಕೊಟ್ಟಿದ್ದಾನೆ.
Advertisement
ಅಷ್ಟೇ ಅಲ್ಲದೇ ನನ್ನ ಬಟ್ಟೆ, ಹಾಸಿಗೆ, ಮಂಚಕ್ಕೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದನು. ಕೊನೆಗೆ ನಾನು ತಪ್ಪಿಸಿಕೊಂಡು ಪಕ್ಕದ ಮನೆಗೆ ಹೋಗಲು ಯತ್ನಸಿದೆ. ಅಷ್ಟರಲ್ಲಿ ಎಳೆದುಕೊಂಡು ಕಾರಿನಲ್ಲಿ ತನ್ನ ತೊಡೆ ಮೇಲೆ ಕೂರಿಸಿಕೊಂಡು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಇನ್ನು ಮೂರು ದಿನದಲ್ಲಿ ನನ್ನ ಸೇವೆಗೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನನ್ನ ಪತಿಯ ಸಹೋದರನ ಮನೆಗೆ ಬಿಟ್ಟು ಹೋಗಿದ್ದಾನೆ. ಆದ್ದರಿಂದ ಸ್ವಾಮೀಜಿ, ಪತಿ ಮತ್ತು ಮೇಲ್ಕಂಡವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv