ಮಡಿಕೇರಿ: ವಿವಾಹಿತೆಯ ಮೇಲೆ ತಡರಾತ್ರಿ ಅತ್ಯಾಚಾರಕ್ಕೆ (Rape) ಯತ್ನಿಸಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ (Somwarpet) ತಾಲೂಕಿನ ಬಿಳಿಗೆರೆ (Biligere) ಗ್ರಾಮದಲ್ಲಿ ನಡೆದಿದೆ.
19 ವರ್ಷದ ವಿವಾಹಿತೆ ರಾತ್ರಿ 9:30ರ ವೇಳೆಗೆ ಮನೆ ಮುಂಭಾಗದಲ್ಲಿ ಪೋನ್‌ನಲ್ಲಿ (Phone) ಮಾತಾನಾಡುತ್ತಿದ್ದಳು. ಈ ಸಂದರ್ಭ ಆಟೋದಲ್ಲಿ (Auto Rickshaw) ಬಂದಿಳಿದ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದನ್ನೂ ಓದಿ: ಸಂಸದರಾಗಲು ಹೊರಟ್ಟಿದ್ದ ಸಿದ್ದರಾಮಯ್ಯ ಸಿಎಂ ಆಗಿದ್ದು ಹೇಗೆ?
Advertisement
ನಂದಿಮೊಟ್ಟೆಯ ರಾಜ, ಹಟ್ಟಿಹೊಳೆಯ ನೌಶದ್, ಇಗ್ಗೋಡ್ಲಿನ ಫಾರೂಕ್ ಎಂಬವರು ಈ ಪ್ರಕರಣದ ಪ್ರಮುಖ ಆರೋಪಿಗಳು. ಬಲತ್ಕಾರವಾಗಿ ಗೃಹಿಣಿಯನ್ನು ಕಾಫಿತೋಟದೊಳಗೆ ಎಳೆದೊಯ್ಯುತ್ತಿದ್ದ ಸಂದರ್ಭ ಆಕೆ ಜೋರಾಗಿ ಕಿರುಚಲಾರಂಭಿಸಿದಳು. ಇದನ್ನು ಗಮನಿಸಿದ ಆಕೆಯ ಸಂಬಂಧಿಕರು ಭಯಭೀತರಾಗಿ ಕೂಡಲೇ ಸ್ಥಳೀಯರಿಗೆ ಹಾಗೂ ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ಪ್ರಮುಖರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿಯಾದ ರಾಜ ಹಾಗೂ ದುಷ್ಕೃತ್ಯಕ್ಕೆ ಬಳಸಿದ್ದ ಎರಡು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. ಈ ದುಷ್ಕೃತ್ಯದಲ್ಲಿ ತೊಡಗಿದ್ದ ಇನ್ನಿಬ್ಬರು ಆರೋಪಿಗಳಾದ ನೌಶದ್ ಹಾಗೂ ಫಾರೂಕ್ ಪರಾರಿಯಾಗಿದ್ದಾರೆ. ಇದನ್ನೂ ಓದಿ: ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದಿದ್ದ ಇನ್‌ಸ್ಪೆಕ್ಟರ್ ಅಮಾನತು
Advertisement
Advertisement
ಫಾರೂಕ್ ಮಾದಾಪುರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ದುಷ್ಕೃತ್ಯಕ್ಕೆ ಬಳಸಿರುವ 2 ಆಟೋರಿಕ್ಷಾಗಳು ನೌಶದ್ ಹಾಗೂ ರಶೀದ್ ಎಂಬವರಿಗೆ ಸೇರಿದ್ದಾಗಿದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿ ಹಾಗೂ ಎರಡು ಆಟೋರಿಕ್ಷಾಗಳನ್ನು ಸೋಮವಾರಪೇಟೆ ಪೋಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಹೊರದೇಶಗಳಿಗೆ ಪಲಾಯನವಾಗುವ ಸಾಧ್ಯತೆಯಿರುವುದರಿಂದ ದುಷ್ಕೃತ್ಯ ನಡೆಸಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಅನ್ಯಾಯಕ್ಕೊಳಗಾದ ವಿವಾಹಿತೆ ಹಾಗೂ ಅವರ ಕುಟುಂಬ ವರ್ಗಕ್ಕೆ ನ್ಯಾಯ ದೊರಕಿಸಲು ಸಂಘಟನೆಯ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಏಳು ಲಕ್ಷ ಮೌಲ್ಯದ ಮದ್ಯ
Advertisement
ಘಟನೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಇದನ್ನೂ ಓದಿ: ಗರ್ಭಪಾತಕ್ಕೆ ಯತ್ನ – 19ರ ಯುವತಿ ಸಾವು