ಬೇಲ್‌ನಲ್ಲಿ ಹೊರಬಂದ ಅತ್ಯಾಚಾರ ಆರೋಪಿ ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ – ಬಳಿಕ ಆತ್ಮಹತ್ಯೆ

Public TV
1 Min Read
bail hammer

ನವದೆಹಲಿ: ಅತ್ಯಾಚಾರ ಆರೋಪಿಯೊಬ್ಬ (Rape Accused) ಜಾಮೀನಿನ (Bail) ಮೇಲೆ ಜೈಲಿನಿಂದ ಹೊರಬಂದು ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿ ನಂತರ ತಾನು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.

ಆಘಾತಕಾರಿ ಘಟನೆ ಮಧ್ಯ ದೆಹಲಿಯಲ್ಲಿ ನಡೆದಿದೆ. ಅತ್ಯಾಚಾರ ಆರೋಪಿ ಪ್ರೇಮ್ ಸಿಂಗ್‌ಗೆ ಕುಟುಂಬದವರ ವಿವಾಹದಲ್ಲಿ ಪಾಲ್ಗೊಳ್ಳಲು ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಗುರುವಾರ ಸಂಜೆ ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಬಳಿಗೆ ತೆರಳಿ ದೂರನ್ನು ಹಿಂಪಡೆಯುವಂತೆ ಕೇಳಿದ್ದಾನೆ. ಅದನ್ನು ನಿರಾಕರಿಸಿದ್ದಕ್ಕೆ ಆತ ಮಹಿಳೆಯ 17 ವರ್ಷದ ಮಗಳ ಮೇಲೆ ಆ್ಯಸಿಡ್ ಎರಚಿದ್ದಾನೆ. ಬಳಿಕ ತಾನೂ ಕುಡಿದಿದ್ದಾನೆ.

police jeep

ಪ್ರೇಮ್ ಸಿಂಗ್ ಹಾಗೂ ಮಹಿಳೆ ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ನೆರೆಹೊರೆಯವರು. ವ್ಯಕ್ತಿ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಾಗ ಪ್ರಕರಣವನ್ನು ಹಿಂಪಡೆಯುವಂತೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಆಕೆ ನಿರಾಕರಿಸಿದಾಗ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡಿಲ್ಲವೆಂದು ಕೈಗೆ ರಾಡ್‍ನಿಂದ ಹೊಡೆದ್ರಾ ಶಿಕ್ಷಕಿ?

ಆ್ಯಸಿಡ್ ದಾಳಿ ಮಾಡಿ ತಾನೂ ಆ್ಯಸಿಡ್ ಅನ್ನು ಕುಡಿದಿದ್ದಾನೆ. ತಕ್ಷಣ ಅಲ್ಲೇ ನೆರೆದಿದ್ದವರು ಆರೋಪಿ ಹಾಗೂ ಅಪ್ರಾಪ್ತೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ವೇಳೆ ಪ್ರೇಮ್ ಸಿಂಗ್ ಮೃತಪಟ್ಟರೆ, ಚಿಕಿತ್ಸೆ ನೀಡಿದ ಬಳಿಕ ಸಂತ್ರಸ್ತೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ: ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

Share This Article