ChitradurgaCrimeDistrictsKarnatakaLatestMain Post

ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿ ಅಪ್ರಾಪ್ತೆಯ ಅತ್ಯಾಚಾರ- ಆರೋಪಿ ಅರೆಸ್ಟ್

Advertisements

ಚಿತ್ರದುರ್ಗ: ಅಪ್ರಾಪ್ತೆಯ ಕೈ-ಕಾಲುಗಳನ್ನು ಹಗ್ಗ್ದಿಂದ ಕಟ್ಟಿಹಾಕಿ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮೂಡಲಗಿರಿಯಪ್ಪ(35) ಎಂದು ಗುರುತಿಸಲಾಗಿದೆ. ಈತನನ್ನು ಚಿತ್ರದುರ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅತ್ತೆಯನ್ನೇ ಕೊಲ್ಲಲು ಸೊಸೆ ಮಾಡಿದ್ಳು ಖತರ್ನಾಕ್ ಪ್ಲಾನ್!

ಬಟ್ಟೆ ತೊಳೆದುಕೊಂಡು ಬರೋಣವೆಂದು ಬಾಲಕಿಯನ್ನು ಪುಸಲಾಯಿಸಿ ಕಾಮುಕ ಗುಡ್ಡಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಅಲ್ಲಿ ಬಾಲಕಿಯ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ಅಲ್ಲದೆ ಈ ವಿಚಾರ ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದನು.

POLICE JEEP

ಇತ್ತ ಘಟನೆ ನಡೆದು ಎರಡು ದಿನಗಳ ಬಳಿಕ ಅಪ್ರಾಪ್ತೆಯು ನಡೆದ ಘಟನೆಯನ್ನು ತನ್ನ ತಾಯಿ ಬಳಿ ವಿವರಿಸಿದ್ದಾಳೆ. ಕೂಡಲೇ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಫೋಕ್ಸೊ ಕಾಯ್ದೆಯಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರು-ಬೈಕ್ ಡಿಕ್ಕಿ – ಬೈಕ್ ಸವಾರ ಬೀಳುತ್ತಿರುವ ವೀಡಿಯೋ ವೈರಲ್

Leave a Reply

Your email address will not be published.

Back to top button