Connect with us

Crime

9 ಬಾಲಕಿಯರನ್ನು ರೇಪ್‍ಗೈದು ಕೊಲೆ ಮಾಡಿದ್ದ ಆರೋಪಿಯ ಬಂಧನ

Published

on

-ವಿಚಾರಣೆಯಲ್ಲಿ ಬಿಚ್ಚಿಟ್ಟಿದ್ದು ಭಯಾನಕ ರಹಸ್ಯ

ದೆಹಲಿ: ಗುರುಗ್ರಾಮ ನಗರದ ಸೆಕ್ಟೇರ್ 66ರಲ್ಲಿ ಮೂರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾನೆ.

ಪೊಲೀಸ್ ವಿಚಾರಣೆಯಲ್ಲಿ ಬಂಧಿತ ಆರೋಪಿ, ಇದೂವರೆಗೂ 9 ಬಾಲಕಿಯರನ್ನು ಅತ್ಯಾಚಾರಗೊಳಿಸಿ ಕೊಲೆ ಮಾಡಿದ್ದೇನೆ ಎಂಬ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ 3 ರಿಂದ 8 ವರ್ಷದ ಬಾಲಕಿಯರನ್ನು ಟಾರ್ಗೆಟ್ ಮಾಡುತ್ತಿದ್ದನು ಎಂಬುವುದು ತಿಳಿದು ಬಂದಿದೆ. ಗುರುಗ್ರಾಮದಲ್ಲಿ 3, ಗ್ವಾಲಿಯರ್ 1, ಝಾನ್ಸಿ 1 ಮತ್ತು ದೆಹಲಿಯಲ್ಲಿ 4 ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ಈಗಾಗಲೇ ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ.

ನವೆಂಬರ್ 12ರಂದು ಸೆಕ್ಟರ್ 66ರಲ್ಲಿ ಮೂರು ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಈ ಬಾಲಕಿ ನವೆಂಬರ್ 11ರಂದು ಮನೆಯಿಂದ ಕಾಣೆಯಾಗಿದ್ದಳು. ಬಾಲಕಿಯನ್ನು ಅತ್ಯಾಚಾರಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಬಿಸಾಡಲಾಗಿತ್ತು. ಬಾಲಕಿಯ ಪೋಷಕರು ಝುಗ್ಗಿ ಏರಿಯಾದಲ್ಲಿ ವಾಸವಾಗಿರುವ ಸುನಿಲ್ ಎಂಬವನೇ ಈ ಕೃತ್ಯ ಎಸಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಪ್ರಕರಣ ಸಂಬಂಧ ಪೊಲೀಸರು ಸುನೀಲ್ ನ ತಾಯಿ ಮತ್ತು ಸೋದರಿ ಇಂದ ಮಾಹಿತಿ ಕಲೆ ಹಾಕಿದ್ದಾರೆ. ಕೊನೆಗೆ ಪೊಲೀಸರು ಝಾಂಸಿಯ ಮಗರಪುರ ಎಂಬ ಗ್ರಾಮದಲ್ಲಿ ಆರೋಪಿ ಸುನೀಲನ ಬಂಧನವಾಗಿದೆ.

ಸತ್ಯ ಕಕ್ಕಿದ ಕಾಮುಕ:
ಅನುಮಾನಾಸ್ಪದವಾಗಿ ಬಂಧಿತನಾಗಿದ್ದ ಸುನೀಲ್ ನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತಾನು ಹಿಂದೆ ಮಾಡಿದ್ದ ಕೃತ್ಯಗಳ ಬಗ್ಗೆಯೂ ಮಾಹಿತಿಯನ್ನು ಹೊರ ಹಾಕಿದ್ದಾನೆ. ಬಾಲಕಿಯರಿಗೆ ಚಾಕಲೇಟ್ ನೀಡುತ್ತೇನೆ ಎಂದು ಕರೆದುಕೊಂಡು ಹೋಗಿ ಮೊದಲಿಗೆ ಅವರ ಕಾಲುಗಳನ್ನು ಊನಗೊಳಿಸುತ್ತಿದ್ದ. ಬಾಲಕಿಯರು ಓಡಿ ಹೋಗಲು ನಿಸ್ಸಾಹಾಯಕರಾದ ಅತ್ಯಾಚಾರ ಎಸಗುತ್ತಿದ್ದನು. ನಂತರ ಕಲ್ಲಿನಿಂದ ಮುಖವನ್ನು ಜಜ್ಜಿ ಕೊಲೆಗೈದು ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗುತ್ತಿದ್ದನು. ಕೊನೆಗೆ ಮದ್ಯ ಸೇವಿಸಿ ಎಂಜಾಯ್ ಮಾಡುತ್ತಿದ್ದನು.

ಯಾರಿವನು ಸುನಿಲ್?
8 ವರ್ಷಗಳ ಹಿಂದೆ ಸುನಿಲ್ ತಂದೆ ಸಾವನ್ನಪ್ಪುತ್ತಾರೆ. ಇದಾದ ಬಳಿಕ ಮನೆಯಿಂದ ಹೊರ ಉಳಿದ ಗುರುದ್ವಾರ, ಮಂದಿರ, ಮಠಗಳಲ್ಲಿ ಊಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಹೆಚ್ಚಾಗಿ ಮನೆಯಿಂದ ಹೊರಗೆ ಉಳಿದುಕೊಳ್ಳುತ್ತಿದ್ದ ಸುನಿಲ್ ಹಣದ ಅವಶ್ಯಕತೆಯಿದ್ದಾಗ ಮಾತ್ರ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಕಳೆದ ಎರಡು ವರ್ಷಗಳಲ್ಲಿ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಎಸೆಗಿ ಕೊಲೆ ಮಾಡಲು ಆರಂಭಿಸಿದ್ದ ಎಂಬುವುದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ದೆಹಲಿ ಅಪರಾಧ ವಿಭಾಗದ ಡಿಸಿಪಿ ಸುಮಿತ್ ಕುಮಾರ್, ನವೆಂಬರ್ 11ರನ್ನು ಬಾಲಕಿತಯನ್ನು ಕೊಲೆಗೈದ ಬಳಿಕ ಆರೋಪಿ ಸುನಿಲ್, ಗುರುಗ್ರಾಮದಲ್ಲಿರುವ ಗುರುದ್ವಾರದಲ್ಲಿ ಊಟ ಮಾಡಿ, ಕಮಲಾ ನೆಹರು ಪಾರ್ಕ್ ನಲ್ಲಿ ಮಲಗಿದ್ದಾನೆ. ನವೆಂಬರ್ 12ರ ಬೆಳಗ್ಗೆ ರೈಲಿನ ಮುಖಾಂತರ ದೆಹಲಿ ತಲುಪಿದ್ದಾನೆ. ನವೆಂಬರ್ 13ರವರೆಗೆ ದೆಹಲಿ ಸುತ್ತಾಡಿ, ನಿಜಾಮುದ್ದೀನ್ ರೈಲ್ವೇ ನಿಲ್ದಾಣದ ಸೇತುವೆಯ ಕೆಳಗೆ ಮಲಗಿದ್ದಾನೆ. ನವೆಂಬರ್ 14 ಝಾನ್ಸಿ ನಗರಕ್ಕೆ ತೆರಳುವ ರೈಲನ್ನು ಹತ್ತಿದ್ದಾನೆ. ಆ ಒಂದು ದಿನ ಝಾನ್ಸಿಯಲ್ಲಿ ತಿರುಗಾಡಿದ್ದಾನೆ. ಖಚಿತ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಗಳಲ್ಲಿ ಸಾಮ್ಯತೆ:
ಸುನಿಲ್ ಮಾಡಿದ ಒಂಭತ್ತು ಕೊಲೆಗಳಲ್ಲಿ ಒಂದು ಅಂಶ ಸಾಮ್ಯತೆ ಎಲ್ಲ ಪ್ರಕರಣಗಳಲ್ಲಿ ದಾಖಲಾಗಿತ್ತು. ಬಾಲಕಿಯರನ್ನು ಅಪಹರಿಸಿದ ಬಳಿಕ ಓಡಿ ಹೋಗಬಾರದೆಂದು ಮೊದಲಿಗೆ ಪುಟ್ಟ ಕಂದಮ್ಮಗಳ ಕಾಲುಗಳನ್ನೇ ಊನಗೊಳಿಸುತ್ತಿದ್ದನು. 2016ರಲ್ಲಿ ಮೊದಲ ಬಾರಿಗೆ ಗುರುಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆಗೈದಿದ್ದ. ಬಳಿಕ ಬಾಲಕಿಯ ದೇಹವನ್ನು ನಗರದ ಓಮ್ಯಾಕ್ಸ್ ಮಾಲ್ ಹಿಂದೆ ಎಸೆದಿದ್ದನು. ಮೊದಲ ಘಟನೆಯ ಎರಡು ತಿಂಗಳ ನಂತರ ಅಂದ್ರೆ 2017 ಜನವರಿಯಲ್ಲಿ 5 ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದನು. ಹೀಗೆಯೇ ತನ್ನ ಕ್ರೌರ್ಯವನ್ನು ಮೆರೆಯುತ್ತಾ, ಗುರುಗ್ರಾಮದಲ್ಲಿ 3, ಗ್ವಾಲಿಯರ್ 1, ಝಾನ್ಸಿ 1 ಮತ್ತು ದೆಹಲಿಯಲ್ಲಿ 4, ಒಟ್ಟು 9 ಕಂದಮ್ಮಗಳ ಸಾವಿಗೆ ಕಾರಣನಾಗಿದ್ದಾನೆ.

ಪೊಲೀಸರಿಂದ ನಾನಾ ಕಸರತ್ತು:
ಸುನಿಲ್ ಕುಟುಂಬಸ್ಥರ ಹೇಳಿಕೆ ಪಡೆದಿದ್ದ, ಪೊಲೀಸರ ಆತನ ನಡವಳಿಕೆ ಮತ್ತು ವರ್ತನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು. ಆತ ಹೆಚ್ಚಾಗಿ ಮಠ, ಮಂದಿರಗಳಲ್ಲಿ ನೀಡಲಾಗುವ ಉಚಿತ ಊಟವನ್ನು ಸೇವಿಸುತ್ತಾನೆ ಎಂಬ ವಿಚಾರ ತಿಳಿದಿತ್ತು. ಸುನಿಲ್ ಬಂಧನಕ್ಕಾಗಿಯೇ ಪೊಲೀಸರು ಗುರುಗ್ರಾಮದಲ್ಲಿ ಮಂಗಳವಾರ ಹನುಮಾನ್ ಮಂದಿರ, ಗುರುವಾರ ಸಾಯಿ ಮಂದಿರ ಮತ್ತು ಶನಿವಾರ ಶನಿ ದೇವಸ್ಥಾನದಲ್ಲಿ ಉಚಿತ ಊಟವನ್ನು ಏರ್ಪಡಿಸಿದ್ದರು. ಈ ಮೂರು ದಿನ ಪೊಲೀಸರು ಬರೋಬ್ಬರಿ 2 ಸಾವಿರಕ್ಕೂ ಅಧಿಕ ಜನರನ್ನು ಪರಿಶೀಲನೆ ನಡೆಸಿದ್ದರು. ಆದರೆ ಸುನಿಲ್ ಯಾವ ಊಟದ ಕಾರ್ಯಕ್ರಮಕ್ಕೂ ಹಾಜರಾಗಿರಲಿಲ್ಲ.

ಆರೋಪಿ ಪತ್ತೆಯಾಗಿದ್ದು ಹೇಗೆ?
ಎಂಟು ಪ್ರಕರಣದಿಂದ ತಪ್ಪಿಸಿಕೊಂಡಿದ್ದ ಸುನಿಲ್ ನವೆಂಬರ್ 12ರಂದು ನಡೆದ ಕೊಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ, ಕೆಲ ಕೂಲಿ ಕಾರ್ಮಿಕರು ಗಮನಿಸಿದ್ದರು. ಈ ಕೂಲಿ ಕಾರ್ಮಿಕರು ಸುನಿಲ್ ಕುಟುಂಬಸ್ಥರು ವಾಸವಾಗಿದ್ದ ಸ್ಲಂನಲ್ಲಿಯೇ ಇದ್ದರು. ಹೀಗಾಗಿ ಕೆಲವರು ಆರೋಪಿಯನ್ನು ಮುಖ ಚಹರೆಯನ್ನು ಗುರುತು ಹಿಡಿದಿದ್ದರು. ಬಾಲಕಿ ಕಾಣೆಯಾಗಿದ್ದ ದಿನ ಆರೋಪಿ ಸೆಕ್ಟರ್ 66ರಲ್ಲಿ ಅನುಮಾನಾಸ್ಪದವಾಗಿ ತಿರುಗಾಡಿದ್ದು ಕೆಲ ಸಿಸಿಟಿವಿಗಳಲ್ಲಿ ಸೆರೆಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *