ಮೈಸೂರು/ಚಿಕ್ಕಬಳ್ಳಾಪುರ: ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ನಾಗನಹಳ್ಳಿ-ಹೆಗ್ಗಡೆಪುರದ ರಸ್ತೆಯಲ್ಲಿ ಗುಂಡಿಗಳು ಬಿಟ್ರೆ ಏನೂ ಇಲ್ಲ. ಡಾಂಬರು ಹಾಕಿದ್ದ ರಸ್ತೆ ಹಾಳಾಗಿ ಹೋಗಿದೆ.
ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಕ್ಷೇತ್ರ ಇದಾಗಿದ್ದು, ಇದೀಗ ರಿಪೇರಿಗೆ ಆಗ್ರಹಿಸಿ ಬೇಸತ್ತ ಊರಿನವರು ಈಗ ವಿನೂತನವಾಗಿ ಪ್ರತಿಭಟಿಸಿದ್ದಾರೆ.
Advertisement
ರಸ್ತೆ ಹಾಳಾಗಿ ಗುಂಡಿ ಬಿದ್ದಿದೆ. ಮಳೆಯಿಂದ ರಸ್ತೆಯೇ ಕೆರೆಯಂತಾಗಿ ಕೆಸರು ತುಂಬಿದೆ. ಇದು ಓಡಾಡುವುದಕ್ಕೆ ಯೋಗ್ಯವಾಗಿಲ್ಲ ಬದಲಾಗಿ ಭತ್ತದ ನಾಟಿಗೆ ಯೋಗ್ಯವಾಗಿದೆ ಎಂದು ಗ್ರಾಮದ ರೈತ ಮಹಿಳೆಯರು ರಸ್ತೆಯಲ್ಲೇ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ರಸ್ತೆ ದುರಸ್ತಿಗೊಳಿಸುವಂತೆ ಸಾಕಷ್ಟು ಬಾರಿ ಗ್ರಾಮಸ್ಥರು ಮನವಿ ಮಾಡಿದ್ರೂ, ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸಿದ ಕಾರಣ ಗ್ರಾಮಸ್ಥರು ಈ ವಿನೂತನ ರೀತಿಯ ಪ್ರತಿಭಟನೆ ಮಾಡಿದ್ದಾರೆ.
Advertisement
ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಎ ರಸ್ತೆ-ಹರಿಹಳ್ಳ-ಗೌಡಹಳ್ಳಿ ಮಾರ್ಗದ ರಸ್ತೆಗೆ ಐದು ದಿನಗಳ ಹಿಂದೆಯಷ್ಟೇ ಹಾಕಿದ್ದ ಡಾಂಬರು ಕಿತ್ಕೊಂಡು ಬರ್ತಿದೆ. 1 ಕೋಟಿ ರೂಪಾಯಿ 17 ಲಕ್ಷ ರೂಪಾಯಿ ಖರ್ಚು ಮಾಡಿ ಒಂದೂವರೆ ಕಿಲೋ ಮೀಟರ್ ರಸ್ತೆಗೆ ಟಾರ್ ಹಾಕಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ಮೂಲದ ಗುತ್ತಿಗೆದಾರ ಜಯಪ್ರಕಾಶ್ ಅನ್ನೋರು ಕಾಮಗಾರಿ ನಡೆಸಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.