ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ʻಮಾಣಿಕ್ಯʼ ಸಿನಿಮಾ ನಟಿ ರನ್ಯಾ ರಾವ್‌ರನ್ನ (Ranya Rao) 3 ದಿನಗಳ ಕಾಲ ಡಿಆರ್‌ಐ (DRI) ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ಮಹತ್ವದ ಸುಳಿವು ಸಿಕ್ಕಿದೆ, ಹಾಗಾಗಿ ಆರೋಪಿ ಸ್ಥಾನದಲ್ಲಿರುವ ನಟಿ ರನ್ಯಾ ರಾವ್‌ಗೆ ಹೆಚ್ಚಿನ ವಿಚಾರಣೆಯ ಅವಶ್ಯಕತೆಯಿದೆ. ಆದ್ದರಿಂದ ಮೂರು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಡಿಆರ್‌ಐ ಅಧಿಕಾರಿಗಳು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಧಿಕಾರಿಗಳ ಮನವಿ ಪುಸ್ಕರಿಸಿದ ನ್ಯಾಯಮೂರ್ತಿ ವಿಶ್ವನಾಥ್ ಸಿ ಗೌಡರ್ ಅವರಿದ್ದ ಪೀಠ ಮೂರು ದಿನಗಳ ಕಸ್ಟಡಿಗೆ ನೀಡಿ ಆದೇಶಿಸಿತು.
ಪರಪ್ಪನ ಅಗ್ರಹಾರ ಜೈಲಿನದಿಂದ ಆರೋಪಿಯನ್ನ ಕರೆದುತಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಮೂರು ದಿನಗಳ ಕಸ್ಟಡಿಗೆ ನೀಡಿದ ಕೋರ್ಟ್ ಒಂದಿಷ್ಟು ವಿಶೇಷ ಸೂಚನೆಗಳನ್ನೂ ನೀಡಿತು. ಇದನ್ನೂ ಓದಿ: Gold Smuggling Case| ರನ್ಯಾ ರಾವ್ ಮನೆಯಲ್ಲಿ ಸಿಕ್ಕಿದ್ದೇನು? – ಅತೀ ದೊಡ್ಡ ಕಾರ್ಯಾಚರಣೆ ಎಂದ DRI
ಕೋರ್ಟ್ ಸೂಚನೆಗಳೇನು?
ಡಿಆರ್‌ಐ ತನಿಖಾಧಿಕಾರಿ ನಾಗೇಶ್ವರ ರಾವ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಅಧಿಕಾರಿಗಳ ಸಮ್ಮುಖದಲ್ಲೇ 30 ನಿಮಿಷಗಳ ಕಾಲ ವಕೀಲರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ವೈದ್ಯಕೀಯ ತಪಾಸಣೆ ನಡೆಸಲು ಕೋರ್ಟ್ ಸೂಚಿಸಿದೆ. ಇದೇ ವೇಳೆ ತನಿಖೆಗೆ ಸಹಕರಿಸುವಂತೆ ಆರೋಪಿಗೂ ಕೋರ್ಟ್ ಸೂಚನೆ ನೀಡಿದೆ.
ಕಸ್ಟಡಿ ವೇಳೆ ಹಿಲ್ ಟ್ರೀಟ್ಮೆಂಟ್ ಕೊಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಊಟ, ಹಾಸಿಗೆಯಂತಹ ಮೂಲ ಸೌಲಭ್ಯಗಳನ್ನು ನೀಡಬೇಕೆಂದಿರುವುದಲ್ಲದೇ ಸುಪ್ರೀಂ ಕೋರ್ಟ್ ನಿಯಮಗಳನ್ನ ಪಾಲಿಸುವಂತೆ, ಆರೋಪಿ ಮೇಲೆ ಒತ್ತಡ ಹೇರದಂತೆ ಡಿಆರ್‌ಐ ಅಧಿಕಾರಿಗಳಿಗೆ ಎಚ್ಚರಿಸಿದೆ. ಇದನ್ನೂ ಓದಿ: 40 ಬಾರಿ ದುಬೈಗೆ ಹೋಗಿದ್ದ ರನ್ಯಾ ಅಧಿಕಾರಿಗಳ ಬಲೆಗೆ ಬಿದ್ದಿದ್ದೆ ರೋಚಕ