ರನ್ಯಾ ಕೇಸ್ – ಗೌರವ್ ಗುಪ್ತಾ ಮಧ್ಯಂತರ ವರದಿ ಕೊಟ್ಟಿರಬಹುದು: ಪರಮೇಶ್ವರ್

Public TV
1 Min Read
G Parameshwar 1

ಬೆಂಗಳೂರು: ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ಪ್ರೋಟೋಕಾಲ್ ಉಲ್ಲಂಘನೆ ತನಿಖೆ ವಿಚಾರವಾಗಿ ಗೌರವ್ ಗುಪ್ತಾ (Gaurav Gupta) ಮಧ್ಯಂತರ ವರದಿ ಕೊಟ್ಟಿರಬಹುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಗೌರವ್ ಗುಪ್ತಾ ಸಿಎಂಗೆ ಮಧ್ಯಂತರ ವರದಿ ಕೊಟ್ಟಿರಬಹುದು. ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಒಂದು ವಾರ ಸಮಯ ಕೊಟ್ಟಿದ್ವಿ, ಅವರು ವರದಿ ಕೊಟ್ಟ ಮೇಲೆ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.ಇದನ್ನೂ ಓದಿ:ರೀಲ್ಸ್ ತಂದ ಸಂಕಷ್ಟ: ವಿಚಾರಣೆಗೆ ಜೊತೆಯಾಗಿ ಹಾಜರಾದ ವಿನಯ್, ರಜತ್

ಇದೇ ವೇಳೆ ಫೋನ್ ಟ್ಯಾಪಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೂ ದೂರು ಕೊಟ್ಟಿಲ್ಲ, ನನ್ನ ಗಮನಕ್ಕೆ ಬಂದಿಲ್ಲ. ಅಶೋಕ್ ಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡಿದ್ದಾರೆ. ದೂರು ಕೊಟ್ಟರೆ ಕ್ರಮ ಆಗಲಿದೆ ಎಂದರು.

ಇನ್ನೂ ಕೆಲಸಚಿವರ ಗೂಢಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಆ ರೀತಿಯಲ್ಲಿ ಯಾರ ಮೇಲೂ ಅನುಮಾನ ಬಂದಿಲ್ಲ. ನಾವು ಕದ್ದು ಮುಚ್ಚಿ ಡಿನ್ನರ್ ಮೀಟಿಂಗ್ ಮಾಡಿಲ್ಲ. ನಮ್ಮನ್ನು ವಾಚ್ ಮಾಡುವವರಿದ್ದರೆ ಮಾಡಲಿ ಎಂದು ತಿಳಿಸಿದರು.ಇದನ್ನೂ ಓದಿ:ಮೇಕೆದಾಟು ಯೋಜನೆಗೆ ಡಿಕೆಶಿಯವರು ಸ್ಟಾಲಿನ್‌ರನ್ನು ಒಪ್ಪಿಸಲಿ: ನಿಖಿಲ್ ಸವಾಲ್

Share This Article