ಬೆಂಗಳೂರು: ನಟಿ ರನ್ಯಾ ರಾವ್ (Ranya Rao) ಕೇಸ್ ಡೆಲ್ಲಿ ಅಂಗಳ ತಲುಪಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕದ (Karnataka) ರಿಪೋರ್ಟ್ ರವಾನೆಯಾಗಿದೆ. ಸಚಿವರ ಮೇಲೆ ಅನುಮಾನ, ಆರೋಪಗಳ ಬೆನ್ನಲ್ಲೇ ರಿಪೋರ್ಟ್ ಕಳುಹಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇಬ್ಬರ ಬಗ್ಗೆ ಸ್ಪಷ್ಟ ಮಾಹಿತಿ ಎರಡೇ ಎರಡು ಸ್ಪಷ್ಟೀಕರಣ ವರದಿಯಲ್ಲಿ ಇದೆ ಎನ್ನಲಾಗಿದೆ. ಸಚಿವರ ವಿಚಾರದಲ್ಲಿ ಡೇಂಜರ್ ಝೋನ್ ಇಲ್ಲ. ನಮ್ಮ ಯಾವ ಸಚಿವರ ಪಾತ್ರವೂ ಇಲ್ಲ ಎಂಬ ವರದಿ ರವಾನೆಯಾಗಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
ಪ್ರೋಟೋಕಾಲ್ ಉಲ್ಲಂಘನೆ ಆರೋಪದಲ್ಲಿ ಸರ್ಕಾರ ಕಠಿಣ ಕ್ರಮ ಅಧಿಕಾರಿಗಳ ಮಟ್ಟದಲ್ಲಿ ಲೋಪ ಆಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವರದಿಯಲ್ಲಿ ಹೇಳಿದ್ದಾರೆ ಎಂಬುದು ಮೂಲಗಳ ಮಾಹಿತಿ.
ಸಚಿವರ ಮೇಲೆ ಬಿಜೆಪಿ ಆರೋಪ ಊಹಾಪೋಹಾ ಅಷ್ಟೇ. ಮದುವೆಗೆ ಹೋಗಿದ್ದನ್ನೇ ಬಿಜೆಪಿ ಲಿಂಕ್ ಮಾಡುತ್ತಿದ್ದಾರೆ ಪಿತೂರಿ ಅಷ್ಟೇ. ಸರ್ಕಾರ, ಸಚಿವರ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಕರಣದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ರವಾನೆಯಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.