– ಸಚಿವರ ಹೆಸರು ಹೇಳಲಿ ಜಾರಕಿಹೊಳಿ
ಬೆಂಗಳೂರು: ರನ್ಯಾರಾವ್ ಕೇಸ್‌ನ (Ranya Rao Case) ತನಿಖೆ ಮುಗಿಯುವ ತನಕ ಕಾಯಬೇಕು. ಯಾವ ಸಚಿವರು ಇದ್ದಾರೆ ಎಂದು ಬಿಜೆಪಿ (BJP) ಅವರು ಹೆಸರು ಹೇಳಲಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ನಡೆಯುತ್ತಿದೆ, ಕಾಯಬೇಕು. ಏರ್‌ಪೋರ್ಟ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತೆ. ಅದು ಕೇಂದ್ರ ಸರ್ಕಾರದ ಜವಾಬ್ದಾರಿ. ಸಚಿವರ ಬಗ್ಗೆ ಮಾತನಾಡಿದರೆ ಏಕೆ ಡ್ಯಾಮೇಜ್ ಆಗುತ್ತೆ? ಅವರ ಹೆಸರು ಹೇಳಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ – ಇಸ್ರೋ ಮತ್ತೊಂದು ಸಾಧನೆ; ಚಂದ್ರಯಾನ-4ಕ್ಕೆ ದಾರಿ
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಡಿನ್ನರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರು ಡಿನ್ನರ್‌ಗೆ ಕರೆದಿದ್ದಾರೆ, ಹೋಗುತ್ತೇನೆ. ಹೋಗಲು ಬೇಕಾಗುತ್ತದೆ. ಅವರು ಪಾರ್ಟಿ ಹೆಸರಲ್ಲಿ ಡಿನ್ನರ್ ಕೊಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ 60% ಕಮಿಷನ್ Just Loot it ಆರೋಪ: ಬಿಜೆಪಿ ಎಕ್ಸ್ ಖಾತೆಯಲ್ಲಿ ವ್ಯಂಗ್ಯ
ಇನ್ನು 40% ಕಮಿಷನ್ ಆರೋಪದ ಬಗ್ಗೆ ಮಾತನಾಡಿ, ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಆಯೋಗ ವರದಿ ಕೊಟ್ಟಿದ್ದಾರೆ. ವರದಿಯಲ್ಲಿ ಏನಿದೆ ನೋಡಬೇಕು ಎಂದರು. ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ 60% ಕಮಿಷನ್ ಆರೋಪದ ಪೋಸ್ಟರ್ ವಿಡಿಯೋ ಬಿಡುಗಡೆ ಬಗ್ಗೆ ಕಿಡಿಕಾರಿದ ಅವರು, ನಮಗೆ ದಾಖಲೆ ಇತ್ತು, ಆರೋಪ ಮಾಡಿದ್ವಿ, ಅವರ ಆರೋಪಕ್ಕೆ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಟಿ ರನ್ಯಾ ರಾವ್ ಮನೆ ಮೇಲೆ ED ದಾಳಿ