ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಬಗೆದಷ್ಟೂ ಸ್ಫೋಟಕ ರಹಸ್ಯಗಳು ಬಯಲಾಗುತ್ತಲೇ ಇವೆ. ಹವಾಲಾ ವಹಿವಾಟಿನಲ್ಲಿ ನಟಿ ರನ್ಯಾ (Ranya Rao) ಪಂಟರ್ ಆಗಿದ್ದ ನಟಿ, ಕಳೆದ ನವೆಂಬರ್ ತಿಂಗಳಿನಿಂದಲೇ ದುಬೈನಿಂದ 50 ಕೆಜಿ ಚಿನ್ನ ಸಾಗಿಸಿದ್ದಳು ಅನ್ನೋ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ.
ಕಳೆದ ನವೆಂಬರ್ ತಿಂಗಳಿನಿಂದಲೇ ಬರೋಬ್ಬರಿ 50 ಕೆಜಿ ಚಿನ್ನ ತಂದು ತನಗೆ ಕೊಟ್ಟಿರುವುದಾಗಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ 3ನೇ ಆರೋಪಿ ಸಾಹಿಲ್ ಜೈನ್ (Sahil Jain) ಡಿಆರ್‌ಐ ಮುಂದೆ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!
ಕಳೆದ ನವೆಂಬರ್‌ನಿಂದಲೇ ರನ್ಯಾ ರಾವ್ ಬರೋಬ್ಬರಿ 50 ಕೆಜಿ ಚಿನ್ನ ತಂದು ಸಾಹಿಲ್ ಜೈನ್‌ಗೆ ಕೊಟ್ಟಿದ್ದಳು. ಈ ಚಿನ್ನವನ್ನ ಸಾಹಿಲ್ ಮಾರಾಟ ಮಾಡಿಕೊಡುವ ಕೆಲಸ ಮಾಡಿದ್ದ. ಅಷ್ಟೇ ಅಲ್ಲ ರನ್ಯಾ ರಾವ್ 30 ಕೋಟಿ ರೂ. ಹಣವನ್ನು ಹವಾಲಾ ಮೂಲಕ ದುಬೈಗೆ ಸಾಗಾಟ ಮಾಡಲಾಗಿತ್ತು ಎಂದು ಸಾಹಿಲ್ ಜೈನ್ ಡಿಆರ್‌ಐ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಡಿಆರ್‌ಐ ಅಧಿಕಾರಿಗಳು ಕೋರ್ಟ್ ಮುಂದೆ ತನಿಖೆಯ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರನ್ಯಾ ಕೇಸ್ – ಗೌರವ್ ಗುಪ್ತಾ ಮಧ್ಯಂತರ ವರದಿ ಕೊಟ್ಟಿರಬಹುದು: ಪರಮೇಶ್ವರ್
ಈ ಪ್ರಕರಣದ ಮೂರನೇ ಆರೋಪಿ ಸಾಹಿಲ್ ಜೈನ್‌ಗೆ ನಿನ್ನೆಯಷ್ಟೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಬಳ್ಳಾರಿ (Ballari) ಮೂಲದ ಸಾಹಿಲ್ ಜೈನ್ ರನ್ಯಾ ರಾವ್ ಜೊತೆಗೆ ವಾಟ್ಸಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಲಾಕ್ ಆಗಿದ್ದ. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಅವರ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದ್ದು, ಸಹೋದರರು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಆದರೆ ಕೆಲ ವರ್ಷಗಳಿಂದ ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ. ಇದನ್ನೂ ಓದಿ: Gold Smuggling Case | ಸ್ವಂತ ಚಿನ್ನಾಭರಣ ಮಳಿಗೆ ಆರಂಭಿಸಲು ಪ್ಲ್ಯಾನ್ ಮಾಡಿದ್ದ ರನ್ಯಾ
ಸಾಹಿಲ್ ಚಿಕ್ಕಂದಿನಿಂದಲೇ ಸೋದರ ಮಾವನ ಜೊತೆಯಲ್ಲಿ ಮುಂಬೈನಲ್ಲಿ ವಾಸ ಮಾಡುತ್ತಿದ್ದ. ಈಗಾಗಲೇ ಇದೇ ರೀತಿಯ ಪ್ರಕರಣದಲ್ಲಿ ಸಾಹಿಲ್ ಮುಂಬೈನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿದ್ದ. ಕಸ್ಟಮ್ಸ್ ಅಧಿಕಾರಿಗಳು ಮುಂಬೈ ಏರ್ಪೋರ್ಟ್‌ನಲ್ಲಿ ಬಂಧಿಸಿದ್ದರು. ಈಗಿನ ಪ್ರಕರಣ ಮತ್ತು ಹಿಂದಿನ ಪ್ರಕರಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಹಾಗೂ ಹವಾಲಾ ನಂಟಿನ ಆರೋಪದಲ್ಲಿಯೇ ಸಾಹಿಲ್ ಜೈನ್ ಬಂಧಿತನಾಗಿದ್ದ.
ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರೋ ಹಿನ್ನೆಲೆ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು. ಬಂಧನದ ಬಳಿಕ ಸಾಹಿಲ್ ಜೈನ್‌ನನ್ನ ಡಿಆರ್‌ಐ ಅಧಿಕಾರಿಗಳು ಕೋರ್ಟ್ ಮುಂದೆ ಹಾಜರುಪಡಿಸಿ 7 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಇಂದು ಕಸ್ಟಡಿ ಅವಧಿ ಮುಕ್ತಾಯಗೊಂಡ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು.