ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ ರಣ್‍ವೀರ್ ಸಿಂಗ್ ಅವರು ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳ ಮೇಲೆ ಜಿಗಿದು ಹಲವರನ್ನು ಗಾಯಗೊಳಿಸಿದ್ದಾರೆ. ರಣ್‍ವೀರ್ ಅವರ ಈ ವರ್ತನೆ ನೋಡಿ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಣ್‍ವೀರ್ ಲ್ಯಾಕ್ಮೆ ಫ್ಯಾಶನ್ ವೀಕ್ ಕಾರ್ಯಕ್ರಮದಲ್ಲಿ ರ‍್ಯಾಂಪ್ ವಾಕ್ ಮೇಲೆ ತಮ್ಮ ‘ಗಲ್ಲಿ ಬಾಯ್’ ಚಿತ್ರದ ‘ಅಪ್‍ನಾ ಟೈಂ ಆಯೇಗಾ’ ಹಾಡನ್ನು ಹಾಡುತ್ತಾ ಏಕಾಏಕಿ ಅಭಿಮಾನಿಗಳ ಮೇಲೆ ಜಿಗಿದಿದ್ದಾರೆ. ಪರಿಣಾಮ ಹಲವು ಅಭಿಮಾನಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಣ್‍ವೀರ್ ಸಿಂಗ್ ಅಭಿಮಾನಿಗಳ ಮೇಲೆ ಜಿಗಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ರಣ್‍ವೀರ್ ತಮ್ಮ ತಲೆಕೂದಲನ್ನು ಸರಿ ಮಾಡಿಕೊಂಡು ಏಕಾಏಕಿ ಅಭಿಮಾನಿಗಳ ಮೇಲೆ ಜಿಗಿದಿದ್ದಾರೆ.
@RanveerOfficial
Next time you jump into the crowd make sure @deepikapadukone stands there to hold you and grab you when you fall into her lap over her. My friend got a really bad sprain on his neck because of your stupid act. You are a married man now… Grow up a bit.
— Arunabha (@Arunabh16507002) February 5, 2019
ರಣ್‍ವೀರ್ ಅವರ ಈ ವಿಡಿಯೋ ನೋಡಿ ಕೆಲವರು ಇದು ಪಬ್ಲಿಸಿಟಿ ಸ್ಟಂಟ್ ಎಂದು ಟ್ವೀಟ್ ಮಾಡಿದ್ದರೆ, ಮತ್ತೆ ಕೆಲವರು ನಿಮಗೆ ಈಗ ಮದುವೆಯಾಗಿದೆ. ಮಕ್ಕಳಂತೆ ವರ್ತಿಸುವುದು ನಿಲ್ಲಿಸಿ. ನಿಮ್ಮ ಈ ವರ್ತನೆಯಿಂದ ನನ್ನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.
ಗಲ್ಲಿ ಬಾಯ್ ಚಿತ್ರದಲ್ಲಿ ರಣ್‍ವೀರ್ ಸಿಂಗ್‍ಗೆ ಜೋಡಿಯಾಗಿ ನಟಿ ಅಲಿಯಾ ಭಟ್ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಜೋಯಾ ಅಖ್ತರ್ ನಿರ್ದೇಶಿಸಿದ್ದಾರೆ. ಈ ಚಿತ್ರ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆ ಆಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv