Connect with us

Bollywood

ಖಿಲ್ಜಿಯ ಫಸ್ಟ್ ಲುಕ್‍ನಿಂದಾಗಿ ಬಾಬಾ ರಾಮ್‍ರಹೀಮ್‍ಸಿಂಗ್‍ನನ್ನು ನೆನಪಿಸಿಕೊಂಡ ಟ್ವಿಟ್ಟರಿಗರು

Published

on

ಮುಂಬೈ: ಬಾಲಿವುಡ್‍ನ ಪದ್ಮಾವತಿ ಸಿನಿಮಾದಲ್ಲಿಯ ರಣ್‍ವೀರ್ ಸಿಂಗ್ ನಟಿಸಿದ್ದ ಪಾತ್ರ `ಅಲ್ಲಾವುದ್ದೀನ್ ಖಿಲ್ಜಿ’ಯ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಆದರೆ ಅದೇ ಫಸ್ಟ್ ಲುಕ್‍ನಿಂದಾಗಿ ರಣ್‍ವೀರ್ ಸಿಂಗ್ ಟ್ರೋಲ್‍ಗೆ ಒಳಗಾಗಿದ್ದಾರೆ. ಖಿಲ್ಜಿ ಕೊಳವೊಂದರಲ್ಲಿ ಸ್ನಾನ ಮಾಡುವ ಫೋಟೋದೊಂದಿಗೆ ಬಾಬಾ ರಾಮ್‍ರಹೀಮ್‍ಸಿಂಗ್ ಫೋಟೋವನ್ನು ಹೋಲಿಕೆ ಮಾಡಲಾಗುತ್ತಿದೆ.

ಇಂದು ಬೆಳಗ್ಗೆ ಫಸ್ಟ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿದ್ದಂತೆ, ಹಲವರು ಫೋಟೋಗೆ ಫನ್ನಿ ಫನ್ನಿ ಕಮೆಂಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಫೋಟೋಗಳನ್ನು ಎಡಿಟ್ ಮಾಡಿ ಬೇರೆ ರಣ್‍ವೀರ್ ಹಳೆಯ ಫೋಟೋಗಳೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ.

ಇದೂವರೆಗೂ ರಣ್‍ವೀರ್ ಕ್ಯೂಟ್ ಮತ್ತು ಲವರ್ ಬಾಯ್ ಇಮೇಜ್ ಇರುವಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಜೀರಾವ್ ಮಸ್ತಾನಿ ಚಿತ್ರದಲ್ಲಿ ಯೋಧನಾಗಿ ನಟಿಸಿದ್ದರೂ, ಮೂಲ ಚಹರೆಯಲ್ಲಿ ಅಷ್ಟೇನೂ ಬದಲಾವಣೆಗಳು ಕಂಡು ಬಂದಿರಲಿಲ್ಲ. ಆದರೆ ಕ್ರೂರ ವ್ಯಕ್ತಿ ಖಿಲ್ಜಿಯಾಗಿ ಕಾಣಿಸಿಕೊಂಡಿರುವ ರಣ್‍ವೀರ್ ನಿಜಕ್ಕೂ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದಾರೆ.

ಫಸ್ಟ್ ಲುಕ್ ಫೋಟೋದಲ್ಲಿ ರಣ್‍ವೀರ್‍ರನ್ನು ಸಂಪೂರ್ಣ ಖಿಲ್ಜಿಯಾನ್ನಾಗಿ ನೋಡಬಹುದಾಗಿದೆ. ರಣ್‍ವೀರ್ ಮುಖದ ಭಾವನೆಗಳಲ್ಲಿ ನಾವು ದ್ವೇಷ, ಕೋಪ, ಕ್ರೌರ್ಯದ ಪ್ರತಿಬಿಂಬವನ್ನು ನೋಡುತ್ತೇವೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಪದ್ಮಾವತಿ ಸಿನಿಮಾ ಡಿಸೆಂಬರ್ 1ರಂದು ದೇಶಾದ್ಯಂತ ತೆರೆಕಾಣಲಿದೆ.

https://twitter.com/Sarcastic__Guru/status/915089066160308224

Click to comment

Leave a Reply

Your email address will not be published. Required fields are marked *

www.publictv.in