Bollywood
ವಿಡಿಯೋ: ಬಲು ದುಃಖದಿಂದ ಈ ಕಾರಣಕ್ಕಾಗಿ ಮೀಸೆ, ಗಡ್ಡವನ್ನ ತೆಗೆದ ರಣ್‍ವೀರ್ ಸಿಂಗ್

ಮುಂಬೈ: ಬಾಲಿವುಡ್ ಫ್ಯಾಶನ್ ಸ್ಟಾರ್ ರಣ್‍ವೀರ್ ಸಿಂಗ್ ತಮ್ಮ ಚೆಂದನೆಯ ಮೀಸೆ ಮತ್ತು ಗಡ್ಡವನ್ನು ಬಲು ದುಃಖದಿಂದ ಕಟ್ ಮಾಡಿಸಿಕೊಂಡಿದ್ದಾರೆ.
ಕೆಲವು ದಿನಗಳಿಂದ ರಣ್‍ವೀರ್ ತಮ್ಮ ಸ್ಟೈಲಿಶ್ ಮೀಸೆ ಮತ್ತು ಗಡ್ಡಗಳಿಂದ ಫ್ಯಾಶನ್ ಐಕಾನ್ ಆಗಿದ್ದರು. ಆದ್ರೆ ಇಂದು ಸ್ವತಃ ರಣ್‍ವೀರ್ ತಮ್ಮ ಹೇರ್ ಸ್ಟೈಲಿಶ್‍ರಿಂದ ತಮ್ಮ ಆಕರ್ಷಣೀಯ ಮೀಸೆ ಮತ್ತು ಉದ್ದನೆಯ ಗಡ್ಡವನ್ನು ತೆಗೆಸಿದ್ದಾರೆ.
ರಣ್‍ವೀರ್ ತಾವು ನಟಿಸುತ್ತಿರುವ `ಪದ್ಮಾವತಿ’ ಚಿತ್ರಕ್ಕಾಗಿ ಇಷ್ಟು ದಿನ ಉದ್ದನೆಯ ಗಡ್ಡವನ್ನು ಬೆಳೆಸಿದ್ದರು. ಚಿತ್ರದ ಅರ್ಧಭಾಗ ಚಿತ್ರೀಕರಣಗೊಂಡಿದ್ದು, ಈಗ ರಣ್‍ವೀರ್ ಯುವಕನಾಗಿ ಕಾಣಿಸಿಕೊಳ್ಳವುದ್ರಿಂದ ಮೀಸೆ ಮತ್ತು ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.
ಇಷ್ಟು ದಿನ ನಡೆದ ಚಿತ್ರದಲ್ಲಿ ರಣ್‍ವೀರ್ ವಯಸ್ಕನ ಪಾತ್ರದ ಶೂಟಿಂಗ್ ನಡೆಯುತಿತ್ತು. ಈಗ ರಣ್‍ವೀರ್ ಸಿನಿಮಾದಲ್ಲಿ ಯುವಕನಾಗಿರುವ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ರಣ್‍ವೀರ್ ತಮ್ಮ ಮೀಸೆ ಮತ್ತು ಗಡ್ಡಕ್ಕೆ ಕತ್ತರಿ ಹಾಕುವ ವಿಡಿಯೋ ಇನ್ ಸ್ಟಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಟ್ ಆದ ಬಳಿಕ ತಮ್ಮ ಮೀಸೆ ಮತ್ತು ಗಡ್ಡದ ಫೋಟೋವನ್ನು ಸಹ ಅಪ್ಲೋಡ್ ಮಾಡಿದ್ದಾರೆ.
ಈ ಮೊದಲು `ಬಾಜೀರಾವ್ ಮಸ್ತಾನಿ’ ಸಿನಿಮಾದಲ್ಲಿ ರಾಜನಾಗಿ ಕಾಣಿಸಿಕೊಂಡಿದ್ದ ರಣ್‍ವೀರ್ ಉದ್ದನೆಯ ಮೀಸೆ ಬಿಟ್ಟಿದ್ದರು. ಸಿನಿಮಾ ರಿಲೀಸ್ ಬಳಿಕ ಖುದ್ದು ಗೆಳತಿ ದೀಪಿಕಾ ಮೀಸೆಗೆ ಕತ್ತರಿ ಹಾಕಿದ್ದರು. ಅಂದು ಸಹ ರಣ್‍ವೀರ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ರು.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಮಿಂಚಲಿದ್ದಾರೆ. ಪದ್ಮಾವತಿಯಾಗಿ ಬೆಡಗಿ ದೀಪಿಕಾ ಪುಡಕೋಣೆ ಮತ್ತು ರಾಣಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸುತ್ತಿದ್ದಾರೆ.
