Bollywood

ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

Published

on

Share this

ಮುಂಬೈ: ಯಾರೂ ನನ್ನನ್ನು ಕೈಹಿಡಿದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದು ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಪೋಸ್ಟ್ ಮಾಡಿದ್ದಾರೆ.

ಲೂಟೆರಾ, ಪದ್ಮಾವತ್, ಗಲ್ಲಿ ಬಾಯ್, ಬೆಲ್ಟ್ ಸಿನಿಮಾಗಳ ಮೂಲಕ ರಣವೀರ್ ಸಿಂಗ್ ಬಾಲಿವುಡ್ ನಲ್ಲಿ ಸ್ಟಾರ್ ನಟರಾಗಿದ್ದಾರೆ. ಈ ಸಿನಿಮಾಗಳ ನಂತರ ಅಭಿಮಾನಿಗಳನ್ನು ಇನ್ನೂ ರಂಜಿಸಲು ಸಿದ್ಧವಾಗುತ್ತಿರುವ ಈ ಗಲ್ಲಿಬಾಯ್ ಜಿಮ್‍ನಲ್ಲಿ ಬೆವರು ಸುರಿಸುತ್ತಿದ್ದಾರೆ. ರಣವೀರ್ ಸಿಂಗ್ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋವನ್ನು ಇನ್‍ಸ್ಟಾಗ್ರಾಮ್ ಗೆ ಹಾಕಿದ್ದು, ಯಾರೂ ನನ್ನನ್ನು ಕೈಹಿಡಿದಿಲ್ಲ, ಬ್ರಹ್ #grind #mondaymotivation ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ನಟ ವರುಣ್ ಧವನ್ ‘ಹಾಟ್’ ಸಿಂಬಲ್ ಇರುವ ಎಮೋಜಿಯನ್ನು ಹಾಕಿ ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ:  ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

 

View this post on Instagram

 

A post shared by Ranveer Singh (@ranveersingh)

ಈ ದಿನಗಳಲ್ಲಿ ರಣವೀರ್ ಉತ್ತುಂಗದಲ್ಲಿದ್ದು, ಇತ್ತೀಚೆಗೆ ಭಾರತದ ನ್ಯಾಷನಲ್ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್(ಎನ್‍ಬಿಎ)ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಕುರಿತು ಎನ್‍ಬಿಎ ಅಧಿಕೃತವಾಗಿ ಫೋಷಣೆಯನ್ನು ಮಾಡಿದೆ. ಈ ಎಲ್ಲಾ ಯಶಸ್ಸು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನನ್ನ ಪರಿಶ್ರಮ ಇರಬೇಕು ಎಂದು ಹೇಳುವ ರೀತಿ ಬರೆದು ಈ ಪೋಸ್ಟ್ ಮಾಡಿದ್ದಾರೆ.

ಬ್ಯುಸಿಯಾಗಿರುವ ಈ ನಟ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಣವೀರ್ ನಟನೆಯ ’83’ ಚಿತ್ರ ಈ ವರ್ಷ ಕ್ರಿಸ್‍ಮಸ್‍ನಲ್ಲಿ ಬಿಡುಗಡೆಯಾಗಲಿದೆ. ತಮಿಳು ಬ್ಲಾಕ್‍ಬಸ್ಟರ್ ಹಿಟ್ ‘ಅನ್ನಿಯನ್ನ’ ಹಿಂದಿ ಸಿನಿಮಾಗೆ ರಿಮೇಕ್ ಆಗುತ್ತಿದ್ದು, ಆ ಚಿತ್ರದಲ್ಲಿ ರಣವೀರ್ ನಟಿಸುತ್ತಿದ್ದಾರೆ. ರಣವೀರ್, ಆಲಿಯಾ ಭಟ್ ಜೊತೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications