ಅಡಲ್ಟ್ ಸಿನಿಮಾ ನಟನೊಂದಿಗೆ ಮತ್ತೆ ಕಾಣಿಸಿಕೊಂಡ ರಣವೀರ್ ಸಿಂಗ್

Public TV
1 Min Read
Ranveer Singh Johnny Sins 2

ಖ್ಯಾತ ಅಡಲ್ಟ್ ಫಿಲ್ಮ್ ನಟ ಜಾನಿ ಸಿನ್ಸ್ (Johnny Sins) ಜೊತೆ ಮತ್ತೆ ಕಾಣಿಸಿಕೊಂಡಿದ್ದಾರೆ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh). ಈ ಹಿಂದೆ ಲೈಂಗಿಕ ಆರೋಗ್ಯದ ಕುರಿತಾದ ಜಾಹೀರಾತಿನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದರು. ಹೆಂಡತಿಯ ಲೈಂಗಿಕ ತೃಪ್ತಿ ಪಡಿಸುವಂತಹ ವಸ್ತುವಿನ ಜಾಹೀರಾತು ಅದಾಗಿತ್ತು.

Ranveer Singh Johnny Sins 1

ಈಗ ಮತ್ತೆ ಅದೇ ಜೋಡಿ, ಅದೇ ಕಂಪನಿಯ ಉತ್ಪನ್ನಕ್ಕೆ ರೂಪದರ್ಶಿಗಳಾಗಿದ್ದಾರೆ. ಶೀ‍ಘ್ರ ಸ್ಖಲನಕ್ಕೆ ಸಂಬಂಧಿಸಿದ ಜಾಹೀರಾತು ಅದಾಗಿದ್ದು, ಫನ್ನಿಯಾಗಿ ಅದು ಮೂಡಿ ಬಂದಿದೆ. ಆ ಉತ್ಪನ್ನವನ್ನು ಬಳಸಿಕೊಂಡು ಜಾನಿ ಸಿನ್ಸ್ ಶೀಘ್ರ ಸ್ಖಲನದಿಂದ ಪಾರಾಗಿದ್ದಾರೆ. ಅವರನ್ನು ಕಂಡ ರಣವೀರ್, ಇವರು ನಮ್ಮ ಸಂತೃಪ್ತ ಗ್ರಾಹಕ ಎಂದು ಪರಿಚಯಿಸುತ್ತಾರೆ. ಒಂದು ರೀತಿಯಲ್ಲಿ ಜಾಹೀರಾತು ಫನ್ನಿಯಾಗಿದೆ.

 

ಒಂದು ಕಡೆ ಜಾನಿ ಅಡಲ್ಟ್ ಚಿತ್ರಗಳಲ್ಲಿ ಮುಳುಗಿ ಹೋಗಿದ್ದಾರೆ. ಮತ್ತೊಂದು ಕಡೆ ರಣವೀರ್ ಸಿಂಗ ಬೆತ್ತಲೆ ಫೊಟೋಶೂಟ್ ಮಾಡಿಸಿಕೊಂಡು ಸಖತ್ ಸದ್ದು ಮಾಡಿದ್ದರು. ಈ ಕಾರಣದಿಂದಾಗಿಯೇ ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಬೇಕಾಗಿತ್ತು. ಇದೀಗ ಬೇರೆ ಮಾರ್ಗದ ಮೂಲಕ ಲೈಂಗಿಕ ಅರಿವನ್ನು ಮೂಡಿಸುತ್ತಿದ್ದಾರೆ.

Share This Article