ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ವಿವಾದ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆಯುತ್ತಿದೆ. ಈಗಾಗಲೇ ಅವರ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಎರಡು ಕಡೆ ದೂರು ನೀಡಲಾಗಿದೆ. ಕೆಲವರು ಪರ, ಇನ್ನೂ ಕೆಲವರು ವಿರೋಧದ ಹೇಳಿಕೆಯನ್ನು ಕೊಡುತ್ತಿದ್ದಾರೆ. ಇಂತಹ ವಿವಾದಾತ್ಮಕ ವಿಷಯಗಳಿಗೆ ಸದಾ ಪ್ರತಿಕ್ರಿಯೆ ನೀಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಈ ಫೋಟೋ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ರಣವೀರ್ ಸಿಂಗ್ ಬೆತ್ತಲೆ ಫೋಟೋ ಬಗ್ಗೆ ಕಾಮೆಂಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಹುಡುಗರು ಬೆತ್ತಲೆಯಾದರೆ ಅದನ್ನು ವಿರೋಧಿಸುತ್ತೀರಿ. ಮಹಿಳೆಯರ ಬೆತ್ತಲೆ ಫೋಟೋಗಳು ಇವೆಯಲ್ಲ, ಅದಕ್ಯಾಕೆ ವಿರೋಧವಿಲ್ಲ ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ಕೆಲವರನ್ನು ಕೆರಳಿಸಿದೆ. ನೀವು ಅದೇ ರೀತಿಯ ಸಿನಿಮಾಗಳನ್ನು ಮಾಡುತ್ತೀರಿ. ಹಾಗಾಗಿ ನಿಮಗೆ ಹಾಗೆ ಅನಿಸುತ್ತದೆ ಎಂದು ಕೆಲವರು ವರ್ಮಾಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋಶೂಟ್‌ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ
ಕಳೆದ ವಾರದಿಂದ ರಣವೀರ್ ಸಿಂಗ್ ಈ ಫೋಟೋ ಹಾಟ್ ಚರ್ಚೆಗೆ ಕಾರಣವಾಗಿದೆ. ಇವರನ್ನೇ ಮಾದರಿಯಾಗಿಟ್ಟುಕೊಂಡು ಕೆಲವರು ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಕೂಡ ತಮ್ಮ ಪತ್ನಿಯಿಂದಲೇ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಉರ್ಫಿ ಜಾವೇದ್ ಸೇರಿದಂತೆ ಹಲವರು ಈ ರೀತಿಯಲ್ಲೇ ಫೋಟೋ ಶೂಟ್ ಮಾಡಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.