Connect with us

Bollywood

ದೀಪಿಕಾನ ಮಿಸ್ ಮಾಡ್ಕೊಳ್ತಿದ್ದಾರಂತೆ ರಣ್‍ವೀರ್ ಸಿಂಗ್

Published

on

ಮುಂಬೈ: ಬಾಲಿವುಡ್ ಹಾಟ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ನಡುವಿನ ಲವ್ ಕೆಮಿಸ್ಟ್ರಿ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಮಾತುಗಳು ಕೇಳಿ ಬರ್ತಾನೆ ಇರುತ್ತೆ. ಆದ್ರೆ ಈ ಜೋಡಿ ಮಾತ್ರ ಈವರೆಗೆ ನಾವು ಲವರ್ಸ್ ಅಂತ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ಆದ್ರೆ ಶನಿವಾರ ದೀಪಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದು, ಅದಕ್ಕೆ ರಣ್‍ವೀರ್ `ಮಿಸ್ಸಿಂಗ್ ಯಾ’ ಎಂದು ಕಮೆಂಟ್ ಹಾಕಿದ್ದಾರೆ.

ರಣ್‍ವೀರ್ ಸಿಂಗ್ ಮತ್ತು ದೀಪಿಕಾ ತಮ್ಮಿಬ್ಬರ ರಿಲೇಶನ್‍ಶಿಫ್ ಬಗ್ಗೆ ಬಹಿರಂಗವಾಗಿ ಯಾವುದೇ ರೀತಿಯಾಗಿ ಹೇಳಿಕೊಂಡಿಲ್ಲ. ಆದರೆ ಈ ಜೋಡಿಗಳು ಮಾತ್ರ ಒಟ್ಟೊಟ್ಟಾಗಿ ಕಾಣಿಸಿಕೊಂಡು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ. ಇದೀಗ ರಣವೀರ್, ನಿನ್ನ ಮಿಸ್ ಮಾಡಿಕೊಳ್ತಿದ್ದೀನಿ ಅಂತ ಕಮೆಂಟ್ ಹಾಕಿ ಕಿಸ್ಸಿಂಗ್ ಎಮೋಜಿ ಕೂಡ ಹಾಕಿದ್ದು, ಇವರಿಬ್ಬರ ಲವ್‍ಕಹಾನಿ ಬಗೆಗಿನ ಮಾತುಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

ಇದನ್ನೂ ಓದಿ:  70ನೇ ವಯಸ್ಸಿನಲ್ಲಿ ದೀಪಿಕಾ ಪಡುಕೋಣೆ ಈ ರೀತಿ ಇರ್ತಾರಂತೆ!

ಕೆಲವು ದಿನಗಳ ಹಿಂದೆ ಪ್ರಶಸ್ತಿ ಸಮಾರಂಭದಲ್ಲಿ ರಣ್‍ವೀರ್ ಎಲ್ಲರೆದರೂ ದೀಪಿಕಾಗೆ ಕಿಸ್ ಕೂಡ ಕೊಟ್ಟಿದ್ದರು. ಖಾಸಗಿ ಚಾನೆಲ್‍ನ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ರಣ್‍ವೀರ್ ಸಿಂಗ್ ಮದುವೆಯಾಗಲು ದೀಪಿಕಾ ಸರಿಯಾದ ಹುಡುಗಿ ಎಂದು ಹೇಳಿಕೊಂಡಿದ್ರು. ಈಗಾಗಲೇ ಈ ಜೋಡಿ ನಟಿಸಿದ ರಾಮ್ ಲೀಲಾ ಮತ್ತು ಬಾಜೀರಾವ್ ಮಸ್ತಾನಿ ಚಿತ್ರಗಳು ಯಶ್ವಸಿಗೊಂಡಿವೆ.

ರಣ್‍ವೀರ್ ಮತ್ತು ದೀಪಿಕಾ ಇಬ್ಬರೂ ಸಂಜಯ್‍ಲೀಲಾ ಬನ್ಸಾಲಿ ನಿರ್ಮಾಣದ `ಪದ್ಮಾವತಿ’ ಚಿತ್ರದಲ್ಲಿ ಮತ್ತೊಮ್ಮೆ ತೆರೆಯ ಮೇಲೆ ಬರಲಿದ್ದಾರೆ.

View this post on Instagram

have fun at the game boys! #championsleague

A post shared by Deepika Padukone (@deepikapadukone) on

 

Click to comment

Leave a Reply

Your email address will not be published. Required fields are marked *