ರ‍್ಯಾಂಪ್ ವಾಕ್ ಮಾಡುವಾಗ, ಪತ್ನಿ ದೀಪಿಕಾ ಕೆನ್ನೆಗೆ ಮುತ್ತಿಟ್ಟ ರಣ್‌ವೀರ್‌ ಸಿಂಗ್

Public TV
2 Min Read
ranveer singh

ಬಾಲಿವುಡ್ ನಟ ರಣ್‌ವೀರ್ ಸಿಂಗ್ (Ranveer Singh) ಅವರು ಸದ್ಯ ಆಲಿಯಾ ಭಟ್ (Alia Bhatt) ಜೊತೆಗಿನ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಗೆ ಅಬ್ಬರಿಸಲಿದೆ. ಇದರ ನಡುವೆ ರಣ್‌ವೀರ್ ಸಿಂಗ್, ಕಾರ್ಯಕ್ರಮವೊಂದರಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ರ‍್ಯಾಂಪ್ ವಾಕ್ ಮಾಡುವಾಗ ಪತ್ನಿ ದೀಪಿಕಾ ಪಡುಕೋಣೆಗೆ ಮುತ್ತಿಟ್ಟಿದ್ದಾರೆ. ಅಷ್ಟೇ ಅಲ್ಲ, ಕರಣ್ ಜೋಹರ್‌ಗೂ ಕಿಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ranveer singh 1

ರಣ್‌ವೀರ್ ಸಿಂಗ್- ದೀಪಿಕಾ ಪಡುಕೋಣೆ (Deepika Padukone) ಅವರು ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮತಿಯ ಮೇರೆಗೆ ಅದ್ದೂರಿಯಾಗಿ ಮದುವೆಯಾದರು. ಖುಷಿಯಾಗಿ, ಒಬ್ಬರಿಗೆ ಮತ್ತೊಬ್ಬರು ಜೊತೆಯಾಗಿ ದೀಪ್ ವೀರ್ ಬಾಳುತ್ತಿದ್ದಾರೆ. ಅದೆಷ್ಟೋ ಬಾರಿ ದೀಪಿಕಾ ಮೇಲಿನ ಪ್ರೀತಿಯನ್ನ ರಣ್‌ವೀರ್ ಸಿಂಗ್ ಬಹಿರಂಗವಾಗಿ ಹೇಳಿದ್ದಾರೆ. ಇದೀಗ ಅಂತಹದ್ದೇ ಒಂದು ಘಟನೆ ಸಾರ್ವಜನಿಕವಾಗಿ ನಡೆದಿದೆ. ಇದನ್ನೂ ಓದಿ:51ನೇ ವಯಸ್ಸಿಗೆ 2ನೇ ಮಗುವಿಗೆ ತಂದೆಯಾದ ‘ಓಂ ಶಾಂತಿ ಓಂ’ ನಟ

ranveer singh 2

ರಣವೀರ್ ಸಿಂಗ್ ಅವರು ರ‍್ಯಾಂಪ್ ವಾಕ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ರ‍್ಯಾಂಪ್ ವಾಕ್ ಮಾಡುವ ವೇದಿಕೆ ಪಕ್ಕದಲ್ಲಿ ಪತ್ನಿ ದೀಪಿಕಾ ಪಡುಕೋಣೆ, ಕರಣ್ ಜೋಹರ್ ಮೊದಲಾದವರು ಜೊತೆಯಾಗಿ ಕುಳಿತಿದ್ದರು. ಮೊದಲು ರಣವೀರ್ ಸಿಂಗ್ ಅವರು ಪತ್ನಿ ದೀಪಿಕಾ ಪಡುಕೋಣೆ ಅವರನ್ನು ನೋಡಿದ್ದಾರೆ. ಈ ವೇಳೆ ಅವರು ಪತ್ನಿಯ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಪಕ್ಕದಲ್ಲೇ ಇದ್ದ ಕರಣ್ ಜೋಹರ್ (Karan Johar) ಕೆನ್ನೆಗೂ ರಣವೀರ್ ಸಿಂಗ್ ಕಿಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್, ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಉಡುಗೆ ಮಸ್ತ್‌ ಆಗಿ ರಣ್‌ವೀರ್‌ ಕಾಣಿಸಿಕೊಂಡಿದ್ದಾರೆ.

ಒಟ್ನಲ್ಲಿ ಈ ಜೋಡಿಯ ಪ್ರೀತಿ ನೋಡಿ, ಫ್ಯಾನ್ಸ್ ದೃಷ್ಟಿ ತೆಗಿರೋ ಅಂತಿದ್ದಾರೆ. ಇನ್ನೂ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಇದೇ ಜುಲೈ 28ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ಸಕ್ಸಸ್ ಇಲ್ಲದೇ ಬೆಸತ್ತಿರೋ ರಣ್‌ವೀರ್‌ಗೆ ಈ ಚಿತ್ರ ಕೈಹಿಡಿಯುತ್ತಾ ಕಾಯಬೇಕಿದೆ.

Share This Article