ಮಸ್ತಾನಿಗೆ ಮೂರು ಗಂಟು ಹಾಕಿ, ಮೂರು ಮಾತು ಕೊಟ್ಟಿದ್ದ ಬಾಜೀರಾವ್

Public TV
2 Min Read
Deepveer 1

– ಮದ್ವೆ ಬಳಿಕ ರಣ್‍ವೀರ್ ಹೆಸ್ರು ಬದಲಿಸಿಕೊಂಡಿದ್ದು ಯಾರಿಗೂ ಗೊತ್ತಾಗೇ ಇಲ್ಲ!

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಪತ್ನಿ ಕೊರಳಿಗೆ ಮೂರು ಗಂಟು ಹಾಕಿ, ಮೂರು ವಚನ ನೀಡಿದ್ದನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಇತ್ತೀಚೆಗೆ ರಣ್‍ವೀರ್ ಸಿಂಗ್ ಫಿಲಂಫೇರ್ ಮ್ಯಾಗಜೀನ್‍ಗೆ ಸಂರ್ದಶನ ನೀಡಿದ್ದರು. ನನ್ನ ಮದುವೆಯಲ್ಲಿ ಮ್ಯೂಸಿಕ್ ವ್ಯವಸ್ಥೆ ಬಿಟ್ಟರೆ ಬೇರೆ ಯಾವ ಕೆಲಸಗಳನ್ನು ಮಾಡಲಿಲ್ಲ. ಮದುವೆ ನಂತರ ನನ್ನ ಜೀವನ ಸಾಕಷ್ಟು ಬದಲಾಗಿದೆ. ಪತ್ನಿಗೆ ಮೂರು ಮಾತುಗಳನ್ನು ನೀಡಿದ್ದು, ಅವುಗಳನ್ನು ಈಗ ಪಾಲಿಸುತ್ತಿದ್ದೇನೆ. ದೀಪಿಕಾಳ ಯಾವುದೇ ಕರೆಗಳನ್ನು ಮಿಸ್ ಮಾಡಿಕೊಳ್ಳಲ್ಲ, ಮನೆಯಿಂದ ಹೊರಗೆ ತುಂಬಾ ಕಾಲಹರಣ ಮಾಡಲ್ಲ ಮತ್ತು ಊಟ ಮಾಡದೇ ಮನೆಯಿಂದ ಹೊರ ಹೋಗಲ್ಲ ಎಂದು ಹೇಳಿ ನಕ್ಕರು.

deepika 1

ಈ ವೇಳೆ ಸಂರ್ದಶಕ “ನಿಮ್ಮನ್ನು ರಣ್‍ವೀರ್ ಸಿಂಗ್ ಪಡುಕೋಣೆ ಎಂದು ಕರೆಯಬೇಕೆಂದು ದೀಪಿಕಾ ಹೇಳಿದ್ದಾರೆ” ಎಂದು ಹೇಳಿದ್ದರು. ಆಗ ರಣ್‍ವೀರ್, “ಸರಿ ನಾನು ನನ್ನ ಅಡ್ಡ ಹೆಸರನ್ನು(ಸರ್ ನೇಮ್) ತೆಗೆಯುತ್ತೇನೆ. ನನಗೆ ಈಗ ಹೊಸ ಅಡ್ಡ ಹೆಸರು ಬೇಕು. ನಾನು ಇನ್ನುಂದೆ ಈ ಲೆಜೆಂಡರಿ ಅಡ್ಡ ಹೆಸರನ್ನು ಬಳಸುತ್ತೇನೆ” ಎಂದು ಹೇಳಿದ್ದಾರೆ.

deepika padukone 2

ಸಂರ್ದಶಕ ರಣ್‍ವೀರ್ ಅವರಿಗೆ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿದರು. ಆಗ ರಣ್‍ವೀರ್ ನಾನು ಮೊದಲು ದೀಪಿಕಾಳನ್ನು ಅವಾರ್ಡ್ ಕಾರ್ಯಕ್ರಮದಲ್ಲಿ ನೋಡಿದೆ. ಆಕೆ ಯಾವ ಉಡುಪು ಧರಿಸಿದ್ದಳು ಎಂಬುವುದು ನನಗೆ ನೆನಪಿಲ್ಲ. ದೀಪಿಕಾಳನ್ನು ಮೊದಲು ನೋಡಿದ್ದಾಗ ನನಗೆ ಏನು ಅನಿಸಿತು ಎಂದು ಹೇಳಲು ಸಾಧ್ಯವಿಲ್ಲ. ನಾನು ದೀಪಿಕಾಳನ್ನು ಭೇಟಿ ಮಾಡಿದ್ದಾಗ ನಾನು ಆಕೆಯ ಜೊತೆ ಫೋಟೋ ತೆಗೆದುಕೊಂಡು ನನ್ನ ಗೆಳೆಯರಿಗೆ ಕಳುಹಿಸಿದೆ. ನೋಡಿ ನಾನು ಯಾರ ಜೊತೆ ಡೇಟ್‍ಗೆ ಹೋಗಿದ್ದೇನೆ ಎಂದು ತಿಳಿಸಿದ್ದೆ ಎಂದು ಹೇಳಿದರು.

ranveer singh

ಇದೇ ವೇಳೆ ಸಂರ್ದಶಕ ನಿಮ್ಮ ಆರತಕ್ಷತೆಗೆ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಎಲ್ಲರೂ ಆಗಮಿಸಿ ನಿಮಗೆ ಶುಭಾಶಯ ಕೋರಲು ಬಂದಿದ್ದರು. ಅವರು ನಿಮ್ಮ ಆರತಕ್ಷತೆಗೆ ಬಂದಿದ್ದು ನಿಮಗೆ ಹೇಗೆ ಅನಿಸಿತು ಎಂದು ಪ್ರಶ್ನಿಸಿದ್ದರು. ಆಗ ರಣ್‍ವೀರ್ ಸಿಂಗ್ ಆರತಕ್ಷತೆಗೆ ಎಲ್ಲರು ಆಗಮಿಸಿದ್ದು ಖುಷಿ ಆಯಿತು. ಅದರಲ್ಲೂ ಅನುಷ್ಕಾ ಶರ್ಮಾ ನನ್ನ ಆರತಕ್ಷತೆಗೆ ಬಂದಿದ್ದು ನನಗೆ ತುಂಬಾನೇ ಸ್ಪೆಷಲ್ ಆಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *