ರಣ್‌ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಮುಂದೂಡಿದ ಫರ್ಹಾನ್ ಅಖ್ತರ್

Public TV
1 Min Read
ranveer singh

ಣ್‌ವೀರ್ ಸಿಂಗ್ (Ranveer Singh) ಮತ್ತು ಕಿಯಾರಾ (Kiara Advani) ನಟನೆಯ ‘ಡಾನ್ 3’ (Don 3) ಚಿತ್ರೀಕರಣವನ್ನು ಡೈರೆಕ್ಟರ್ ಫರ್ಹಾನ್ ಅಖ್ತರ್ ಮುಂದೂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ‘ಡಾನ್ 3’ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಂಡ ಅಮೆರಿಕದ ನಟ

ranveer singh 2

ನಟ ಕಮ್ ನಿರ್ದೇಶಕ ಫರ್ಹಾನ್ ಅಖ್ತರ್ ಡೈರೆಕ್ಷನ್ ಸಿನಿಮಾ ‘ಡಾನ್ 3’ ಇದೇ ಆಗಸ್ಟ್‌ನಿಂದ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದಿನ ಮೇ ಅಥವಾ ಜೂನ್‌ನಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ:ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ

 

View this post on Instagram

 

A post shared by Farhan Akhtar (@faroutakhtar)

ಆ ಕಡೆ ಆದಿತ್ಯಾ ಧರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಣ್‌ವೀರ್ ಬ್ಯುಸಿಯಾಗಿದ್ರೆ, ಇತ್ತ ಕಿಯಾರಾ ‘ವಾರ್ 2’ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರ ಡೇಟ್ಸ್ ಬ್ಯುಸಿಯಿರುವ ಹಿನ್ನೆಲೆ ತಾವು ನಟಿಸಲು ಒಪ್ಪಿಕೊಂಡಿದ್ದ ಸಿನಿಮಾಗೆ ಫರ್ಹಾನ್ ಗ್ರೀನ್ ಕೊಟ್ಟಿದ್ದಾರೆ. ‘120 ಬಹದ್ದೂರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಕುರಿತು ನಿರ್ದೇಶಕ ಅಧಿಕೃತ ಮಾಹಿತಿ ಕೂಡ ನೀಡಿದ್ದಾರೆ.

ಇನ್ನೂ ‘ಡಾನ್ 3’ ಚಿತ್ರವನ್ನು ಮುಂದಿನ ವರ್ಷ ಮೇಯಿಂದ ಶೂಟಿಂಗ್ ಶುರು ಮಾಡಲು ತಂಡ ನಿರ್ಧರಿಸಿದೆ. ಅಷ್ಟರಲ್ಲಿ ಫರ್ಹಾನ್, ರಣ್‌ವೀರ್, ಕಿಯಾರಾ (Kiara Advani) ಪ್ರಸ್ತುತ ನಟಿಸುತ್ತಿರುವ ಸಿನಿಮಾಗಳ ಚಿತ್ರೀಕರಣ ಮುಗಿಸಿಕೊಡಬೇಕಿದೆ.

Share This Article