ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕವನ್ನು ದಿಢೀರ್ ಅಂತಾ ಬದಲಾಯಿಸಿದ್ದು, ನವೆಂಬರ್ ನಿಂದ ಏಪ್ರಿಲ್ ಗೆ ಪೋಸ್ಟ್ ಪೋನ್ ಮಾಡಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಧಾರ್ಮಿಕ ಸಂಘಟನೆಯೊಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ಮಾಡಿ ಸಿನಿಮಾ ಸೆಟ್‍ಗಳಿಗೆ ಬೆಂಕಿ ಹಚ್ಚಿದ್ದರು. ಈಗ ಶೇ.95ರಷ್ಟು ಭಾಗದಷ್ಟು ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇನ್ನೂ ಕೇವಲ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ಬಾಕಿ ಉಳಿದುಕೊಂಡಿವೆ. ಈ ನಡುವೆ ಶಾಹೀದ್ ಹಾಗೂ ದೀಪಿಕಾ ಫ್ಯಾಮಿಲಿ ವೇಕೆಷನ್ ಅಂತಾ ಹೋಗಿದ್ದರು. ಕೆಲವು ದಿನಗಳಿಂದ ಪದ್ಮಾವತಿ ಚಿತ್ರ 2018 ಏಪ್ರಿಲ್ ನಲ್ಲಿ ಬಿಡುಗೆಡೆಯಾಗಲಿದೆ ಎನ್ನುವುದಾಗಿ ವರದಿಯಾಗುತ್ತಿದೆ.
Advertisement
Advertisement
ಇದನ್ನೂ ಓದಿ: ಪದ್ಮಾವತಿ ಸಿನಿಮಾದಿಂದ ಹಿಂದೆ ಸರಿದ ಸಲ್ಮಾನ್ ಖಾನ್!
Advertisement
ಏಪ್ರಿಲ್‍ನಲ್ಲೇ ಯಾಕೆ?: ಏಪ್ರಿಲ್ ತಿಂಗಳಿನಲ್ಲಿ ಬಾಹುಬಲಿ ಬಿಡುಗಡೆಯಾಗಿತ್ತು. ಆ ವೇಳೆ ಶಾಲಾ ರಜೆಗಳು ಪ್ರಾರಂಭಗೊಳ್ಳುತ್ತವೆ. ಆದರೆ ನವೆಂಬರ್ ತಿಂಗಳಿನಲ್ಲಿ ಯಾವುದೇ ರಜೆಗಳಿಲ್ಲದ ಕಾರಣ ಚಿತ್ರವನ್ನು ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸಮಯದಲ್ಲಿ ಬಿಡುಗಡೆಯಾದರೆ ಸುಮಾರು 150 ಕೋಟಿ ರೂ. ಹಣವನ್ನು ಪದ್ಮಾವತಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
Advertisement
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಕೆಲವು ತಿಂಗಳು ನಡೆಯಲಿದೆ. ಚಿತ್ರದಲ್ಲಿ ಹಲವು ಯುದ್ಧದ ಶೂಟಿಂಗ್ ನಡೆಯಲಿರುವುದರಿಂದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ ಎನ್ನಲಾಗಿದೆ. ಸಿನಿಮಾದಲ್ಲಿ ಶಾಹೀದ್, ರಣ್‍ವೀರ್ ಮತ್ತು ದೀಪಿಕಾರ ಮುಖ್ಯ ಸನ್ನಿವೇಶಗಳು ಚಿತ್ರೀಕರಣ ನಡೆಯಬೇಕಿದೆ.
ಪದ್ಮಾವತಿ ಬಿಡುಗಡೆ ಯಾವಾಗ ಆಗಲಿದೆ ಎನ್ನುವ ಬಗ್ಗೆ ತ್ರತಂಡ ಇದೂವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ.
ಇದನ್ನೂ ಓದಿ: ರಣ್‍ವೀರ್, ಶಾಹೀದ್‍ಗಿಂತ ಇಷ್ಟು ಹೆಚ್ಚು ಸಂಭಾವನೆ ಪಡೆದ ದೀಪಿಕಾ!