ವೈರಲಾಯ್ತು ರಣ್‍ವೀರ್, ದೀಪಿಕಾ ಪ್ರೈವೇಟ್ ಫೋಟೋ

Public TV
1 Min Read
ranveer singh deepika padukone sets swaragini

ಮುಂಬೈ: ಬಾಲಿವುಡ್ ನ ಹಾಟ್ ಆ್ಯಂಡ್ ಸೆಕ್ಸಿ ಕಪಲ್ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ಚುಂಬನದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಣ್‍ವೀರ್ ಮತ್ತು ದೀಪಿಕಾ ಪಡುಕೋಣೆ ಕಳೆದ ಐದು ವರ್ಷಗಳಿಂದ ಡೇಟ್‍ನಲ್ಲಿದ್ದಾರೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲವಾದ್ರೂ, ಸಾಕ್ಷಿ ಎಂಬಂತೆ ಜೊತೆ ಜೊತೆಯಾಗಿ ಸುತ್ತಾಡಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಈ ಫೋಟೋವನ್ನು ಟ್ವಿಟರ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, #DeepVeer ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

2ed797b8ff576f235c1656f9ebef9413

ಇದನ್ನೂ ಓದಿ: 6 ವಾರಗಳಲ್ಲಿ ಹಾಟ್ ಲುಕ್ ಪಡೆದ ರಣ್‍ವೀರ್ ಸಿಂಗ್- ಹೇಗೆಂತೀರಾ ಹಾಗಾದ್ರೆ ಈ ಸ್ಟೋರಿ ಓದಿ 

ಇನ್ನೂ ಈ ಫೋಟೋ ನೋಡಿದ ಹಲವರು ಇದು ಬಾಜೀರಾವ್ ಮಸ್ತಾನಿ ಸಿನಿಮಾದ ವೇಳೆ ತೆಗೆದ ಫೋಟೋ ಎಂದು ಹೇಳಿದ್ದಾರೆ. ಸ್ಕ್ರೀನ್ ಹಿಂದೆ ಒಬ್ಬರೊಬ್ಬರನ್ನು ತಬ್ಬಿಕೊಂಡು ಲಿಪ್ ಲಾಕ್ ಮಾಡುವ ಫೋಟೋಗೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿದೆ.

ಇದನ್ನೂ ಓದಿ: ದೀಪಿಕಾಳಿಗೆ ಮೊದಲು ಈ ನಟನ ಮೇಲೆ ಕ್ರಶ್ ಆಗಿತ್ತಂತೆ

ಈಗಾಗಲೇ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಬಾಲಿವುಡ್‍ನ ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ `ಪದ್ಮಾವತಿ’ ಯಲ್ಲಿ ಈ ಜೋಡಿ ಜೊತೆಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಅರ್ಧಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನು ಅರ್ಧ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಇದನ್ನೂ ಓದಿ: ರಣ್‍ವೀರ್ ಸಿಂಗ್ ಡ್ರೆಸ್ ನೋಡಿ ಸಿಡಿಮಿಡಿಗೊಂಡ ದೀಪಿಕಾ!

ಇದನ್ನೂ ಓದಿ: ವಿಡಿಯೋ: ಬಲು ದುಃಖದಿಂದ ಈ ಕಾರಣಕ್ಕಾಗಿ ಮೀಸೆ, ಗಡ್ಡವನ್ನ ತೆಗೆದ ರಣ್‍ವೀರ್ ಸಿಂಗ್ 

https://twitter.com/rsdp4ever/status/898752470054088704

https://twitter.com/rsdp4ever/status/898803345153970176

ranveer deepika story 647 012016052026

ranveer 1

 

Share This Article
Leave a Comment

Leave a Reply

Your email address will not be published. Required fields are marked *