Bengaluru CityBollywoodCinemaLatestMain Post

ನಗ್ನ ಫೋಟೋಶೂಟ್‌ ಬೆನ್ನಲ್ಲೇ ದೀಪ್‌ವೀರ್‌ ರೊಮ್ಯಾಂಟಿಕ್ ರ‍್ಯಾಂಪ್ ವಾಕ್

Advertisements

ಬಿಟೌನ್ ಬೆಸ್ಟ್ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಸದಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಸದಾ ಕೈ ಕೈ ಹಿಡಿದು ಓಡಾಡುವ ಈ ಜೋಡಿ ಇತ್ತೀಚೆಗಷ್ಟೆ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಈ ಜೋಡಿಯ ರ‍್ಯಾಂಪ್ ವಾಕ್ ಫೋಟೋ ಸಖತ್ ವೈರಲ್ ಆಗುತ್ತಿದೆ.

ದೀಪಿಕಾ ದಂಪತಿ ಇದೀಗ ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮಿಜ್ವಾನ್ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಈ ಶೋನಲ್ಲಿ ಅನೇಕ ಗಣ್ಯರು, ಬಾಲಿವುಡ್ ಕಲಾವಿದರು ಭಾಗಿಯಾಗಿದ್ದರು. 2022ನೇ ಮಿಜ್ವಾನ್ ಫ್ಯಾಷನ್ ಶೋ ಇದಾಗಿದ್ದು ಈ ಬಾರಿ ದೀಪಿಕಾ ಮತ್ತು ರಣವೀರ್ ಸಿಂಗ್ ಮಿಂಚಿದ್ದಾರೆ. ಆದರೆ ದೀಪಿಕಾ ಮತ್ತು ರಣವೀರ್ ಸಿಂಗ್ ಜೋಡಿ ಎಲ್ಲರ ಗಮನ ಸೆಳೆದರು. ರಾಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ದೀಪ್‌ವೀರ್ ಜೋಡಿ ಅಭಿಮಾನಿಗಳ ಹೃದಯ ಗೆದ್ದರು. ಇಬ್ಬರ ರೊಮ್ಯಾಂಟಿಕ್ ರ‍್ಯಾಂಪ್ ವಾಕ್‌ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌ ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

 

View this post on Instagram

 

A post shared by Deepika Padukone (@deepikapadukone)

ರಾಯಲ್ ಲುಕ್‌ನಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ. ರಣವೀರ್ ಸಿಂಗ್ ಗ್ರ‍್ಯಾಂಡ್ ಶೇರ್ವಾನಿಯಲ್ಲಿ ಮಿಂಚಿದ್ರೆ ನಟಿ ದೀಪಿಕಾ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ರಣವೀರ್ ಸಿಂಗ್ ಪತ್ನಿ ದೀಪಿಕಾಗೆ ಕಿಸ್ ಮಾಡಿ ಪ್ರೀತಿ ವ್ಯಕ್ತಪಡಿಸಿದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Live Tv

Leave a Reply

Your email address will not be published.

Back to top button