ಮುಂಬೈ: ಸಾಂಸರಿಕ ಜೀವನಕ್ಕೆ ಕಾಲಿಟ್ಟಿರುವ ನವದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಇಂದು ಮುಂಬೈಗೆ ಬಂದಿದ್ದಾರೆ. ಮುಂಬೈಗೆ ಬಂದಿಳಿದ ದಂಪತಿಗೆ ಅಭಿಮಾನಿಗಳು ಭವ್ಯವಾದ ಸ್ವಾಗತಕೋರಿದ್ದಾರೆ.
ನವೆಂಬರ್ 14 ಮತ್ತು 15ರಂದು ಇಟಲಿಯ ಕೊಮೊ ಸಿಟಿಯಲ್ಲಿ ದೀಪ್‍ವೀರ್ ಜೋಡಿ ಮದುವೆ ಆಗಿತ್ತು. ಖಾಸಗಿಯಾಗಿ ನಡೆದಿದ್ದ ಮದುವೆ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಆಪ್ತರು ಮತ್ತು ಬಾಲಿವುಡ್ ತಾರೆಯರು ಮಾತ್ರ ಭಾಗಿಯಾಗಿದ್ದರು. ಬಾಲಿವುಡ್ ಅಂಗಳದ ಟಾಪ್ ನಟಿಯಾಗಿರುವ ದೀಪಿಕಾ ಆರತಕ್ಷತೆಯ ಬಳಿಕ ತಮ್ಮ ಮುಂದಿನ ಕೆಲಸಗಳತ್ತ ಗಮನಹರಿಸಲಿದ್ದಾರೆ. ಇತ್ತ ರಣ್‍ವೀರ್ ಸಿಂಗ್ ಸಹ ತಮ್ಮ ಸಿಂಭಾ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.
WATCH: Ranveer Singh and Deepika Padukone at Ranveer Singh's residence in Mumbai. They got married earlier this week in Italy's Lombardy pic.twitter.com/kgaiq87WTO
— ANI (@ANI) November 18, 2018
ಇದೇ ತಿಂಗಳು 25ರಂದು ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಆರತಕ್ಷತೆಯನ್ನು ಏರ್ಪಡಿಸಿದ್ದಾರೆ. ನವೆಂಬರ್ 28ರಂದು ಮುಂಬೈನಲ್ಲಿ ರಣ್‍ವೀರ್ ಸಿಂಗ್ ಕುಟುಂಬಸ್ಥರು ತಮ್ಮ ಬಂಧುಗಳಿಗಾಗಿ ವಿಶೇಷವಾಗಿ ಆರತಕ್ಷತೆಯನ್ನು ಆಯೋಜನೆ ಮಾಡಿದ್ದಾರೆ. ಎರಡು ಸಂಪ್ರದಾಯಗಳಲ್ಲಿ ಮದುವೆ ಆಗಿರುವ ಜೋಡಿ, ಆರತಕ್ಷತೆಯನ್ನು ಎರಡು ಬಾರಿ ಆಯೋಜಿಸಿದ್ದಾರೆ.
https://www.instagram.com/p/BqT4CBfhGN9/
https://www.instagram.com/p/BqT4H7_Bqmj/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews