ಬಾಲಿವುಡ್ ನ ಖ್ಯಾತ ಟಾಕ್ ಶೋ ‘ಕಾಫಿ ವಿತ್ ಕರಣ್’ ಇದೀಗ ಸೀಸನ್ 8 ಕಂಡಿದೆ. ಸದ್ಯದಲ್ಲೇ ಸೀಸನ್ 8 ಕೂಡ ಶುರುವಾಗಲಿದೆ. ಮೊದಲ ಎಪಿಸೋಡ್ ನಲ್ಲಿ ಕರಣ್ ಜೋಹಾರ್ ಜೊತೆ ಮಾತನಾಡಲಿದ್ದಾರಂತೆ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೋಡಿ. ಕರಣ್ ಮಾತುಗಳು ಅಂದರೆ ಅದಕ್ಕೆ ಸೆನ್ಸಾರ್ ಇರುವುದಿಲ್ಲ. ರಣವೀರ್ ಕೂಡ ಅಷ್ಟೇ ಬೋಲ್ಡ್ ಆಗಿ ಮಾತನಾಡುವಂತಹ ನಟ. ಹಾಗಾಗಿ ಮೊದಲನೇ ಎಪಿಸೋಡ್ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಎಲ್ಲರದ್ದು.
Advertisement
ಕರಣ್ ಶೋನಲ್ಲಿ ಕನ್ನಡದ ನಟರು
Advertisement
ನಿರ್ಮಾಪಕ ಕರಣ್ ಜೋಹರ್ (Karan Johar) ನಿರೂಪಣೆಯ ಕಾರ್ಯಕ್ರಮ ಶುರು ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಹೊಸ ಸೀಸನ್ನಲ್ಲಿ ನ್ಯಾಷನಲ್ ಸ್ಟಾರ್ ಯಶ್- ರಿಷಬ್ ಶೆಟ್ಟಿ (Rishab Shetty) ಭಾಗಿಯಾಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.
Advertisement
Advertisement
ಬಾಲಿವುಡ್ ಅಡ್ಡಾದ ಫೇಮಸ್ `ಕಾಫಿ ವಿತ್ ಕರಣ್’ ಶೋಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಸಂದರ್ಶನದ ಜೊತೆ ವಿವಾದಗಳು ಅಂಟಿಕೊಳ್ಳುವ ಈ ಶೋಗೆ ಸೆಲೆಬ್ರಿಟಿಗಳು ಬರಲು ಯೋಚನೆ ಮಾಡುತ್ತಾರೆ. ಹೀಗಿರುವಾಗ ಕರಣ್ ಶೋಗೆ ಯಶ್- ರಿಷಬ್ ಶೆಟ್ಟಿ ಬರುತ್ತಿದ್ದಾರೆ ಎಂಬ ಸುದ್ದಿ ಬಿಟೌನ್ನಲ್ಲಿ ಹರಿದಾಡುತ್ತಿದೆ.
ಹೌದು.. ಕಾಫಿ ವಿತ್ ಕರಣ್ ಕಾರ್ಯಕ್ರಮದ ಈವರೆಗಿನ ಸೀಸನ್ಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಣೆ ಹಾಕಿದ್ದೇ ಹೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ನಟ-ನಟಿಯರು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದರಿಂದ ಕರಣ್ ಜೋಹರ್ ಅವರು ಸೌತ್ ಸ್ಟಾರ್ಗಳ ಕಡೆಗೂ ಗಮನ ಹರಿಸಲು ಆರಂಭಿಸಿದ್ದಾರೆ. 8ನೇ ಸೀಸನ್ನಲ್ಲಿ ಯಶ್, ರಿಷಬ್ ಶೆಟ್ಟಿ ಹಾಗೂ ಅಲ್ಲು ಅರ್ಜುನ್ ಅವರು ಪತ್ನಿ ಸಮೇತರಾಗಿ ಈ ಶೋನಲ್ಲಿ ಹಾಜರಿ ಹಾಕಲಿದ್ದಾರೆ ಎಂದು ಸುದ್ದಿ ಪ್ರಕಟ ಆಗಿದೆ. ಈ ಬಗ್ಗೆ ಕರಣ್ ಜೋಹರ್ ಅವರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಯಶ್ (Yash), ರಿಷಬ್ ಶೆಟ್ಟಿ, ಅಲ್ಲು ಅರ್ಜುನ್ ಕೂಡ ಸುದ್ದಿ ಬಿಟ್ಟುಕೊಟ್ಟಿಲ್ಲ.
Web Stories