ಮುಂಬೈ: ಇಂಟರ್‌ನೆಟ್ ಸೆನ್ಸೇಷನ್ ರಾನು ಮೊಂಡಲ್ ಅವರು ಹಾಡಿದ ಮೊದಲ ಹಾಡು ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ.
ರಾನು ಅವರು ಗಾಯಕ ಹಿಮೇಶ್ ರೇಶ್ಮಿಯಾ ನಟಿಸಿದ ‘ಹ್ಯಾಪಿ ಹಾರ್ಡಿ ಹಾಗೂ ಹೂರ್’ ಚಿತ್ರದಲ್ಲಿ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ರಾನು ಅವರು ಹಾಡುತ್ತಿದ್ದ ವಿಡಿಯೋವನ್ನು ಹಿಮೇಶ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
Advertisement
ಇತ್ತೀಚೆಗೆ ತೇರಿ ಮೇರಿ ಕಹಾನಿ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿತ್ತು. ಈ ವಿಡಿಯೋ ಸಾಕಷ್ಟು ಹಿಟ್ ಕೂಡ ಆಗಿತ್ತು. ಜನರು ಈ ವಿಡಿಯೋವನ್ನು ಶೇರ್ ಮಾಡುವುದರ ಮೂಲಕ ರಾನು ಅವರಿಗೆ ತಮ್ಮ ಪ್ರೀತಿಯನ್ನು ತೋರಿಸಿದ್ದರು.
Advertisement
Advertisement
ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಅವರು ಹಾಡಿದ ಮೊದಲ ಹಾಡು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಲ್ಲದೆ ಚಿತ್ರದ ನಿರ್ಮಾಪಕರಾದ ದೀಪ್ಷಿಕಾ ದೇಶ್‍ಮುಖ್ ಹಾಗೂ ಸಬಿತಾ ಮನಕ್ಚಂದ್ ಅವರು ಮೊದಲು ಚಿತ್ರದ ಎಲ್ಲಾ ಹಾಡುಗಳನ್ನು ಬಿಡುಗಡೆ ಮಾಡಿ ನಂತರ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಹಿಮೇಶ್ ರೇಶ್ಮಿಯಾ ಅವರು, “ಹ್ಯಾಪಿ, ಹಾರ್ಡಿ ಹಾಗೂ ಹೀರ್ ಚಿತ್ರಕ್ಕೆ ಜನರು ಪ್ರೀತಿ ತೋರಿಸುತ್ತಿರುವುದು ನೋಡಿ ನನಗೆ ಸಾಕಷ್ಟು ಖುಷಿ ಆಗುತ್ತಿದೆ. ದೇವರ ದಯೆಯಿಂದ ಈ ಚಿತ್ರ ಹೊಸ ಪ್ರವೃತ್ತಿಯನ್ನು ಹೊಂದುತ್ತದೆ ಎಂಬ ವಿಶ್ವಾಸ ನನಗೆ ಇದೆ. ರಾನು ಅವರು ಕೂಡ ತುಂಬಾ ಅದ್ಭುತವಾಗಿ ಹಾಡುಗಳನ್ನು ಹಾಡಿದ್ದಾರೆ. ಪ್ರೇಕ್ಷಕರು ಹಾಡನ್ನು ಇಷ್ಟಪಡುತ್ತಾರೆ ಹಾಗೂ ಎಂಜಾಯ್ ಮಾಡುತ್ತಾರೆ ಎಂದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.