Connect with us

Bollywood

ಸಿಂಗಿಂಗ್, ಕ್ಯಾಟ್‍ವಾಕ್ ನಂತ್ರ ರೇಡಿಯೋ ಸ್ಟೇಷನ್‌ನಲ್ಲಿ ರಾನು ಮೊಂಡಲ್: ವಿಡಿಯೋ

Published

on

ಲಕ್ನೋ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ಅವರ ಸಿಂಗಿಂಗ್, ಕ್ಯಾಟ್‍ವಾಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರು ರೇಡಿಯೋ ಸ್ಟೇಷನ್‌ನಲ್ಲಿ ಹಾಡು ಹಾಡುವ ವಿಡಿಯೋ ವೈರಲ್ ಆಗಿದೆ.

ರಾನು ಮೊಂಡಲ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಎಫ್‍ಎಂ ರೇಡಿಯೋ ಸ್ಟೇಷನ್‌ ಗೆ ಹೋಗಿ ಅಭಿಮಾನಿಗಳಿಗೋಸ್ಕರ ಹಾಡನ್ನು ಹಾಡಿದ್ದಾರೆ. ರಾನು ಕಾನ್ಪುರಕ್ಕೆ ತಲುಪಿದ್ದು ಅಲ್ಲಿ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇದ್ದನ್ನೂ ಓದಿ: ರಾನು ಮೊಂಡಲ್ ಮೇಕಪ್ ಫೋಟೋ ವೈರಲ್ – ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

Advertisement
Continue Reading Below

ಉತ್ತರ ಪ್ರದೇಶದ ಕಾನ್ಪುರದ ಬ್ಯೂಟಿ ಪಾರ್ಲರ್ ಕಾರ್ಯಕ್ರಮಕ್ಕೆ ರಾನು ಆಗಮಿಸಿದ್ದರು. ಈ ವೇಳೆ ಸ್ವತಃ ಮೇಕಪ್ ಆರ್ಟಿಸ್ಟ್ ಅವರಿಗೆ ಮೇಕಪ್ ಮಾಡಿದ್ದರು. ಆದರೆ ಅಭಿಮಾನಿಗಳಿಗೆ ರಾನು ಅವರ ಮೇಕಪ್ ಇಷ್ಟವಾಗಲಿಲ್ಲ. ಹಾಗಾಗಿ ರಾನು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಇದ್ದನ್ನೂ ಓದಿ: ಕ್ಯಾಟ್ ವಾಕ್ ಮಾಡಿ ಕೈ ಬೀಸಿದ ರಾನು: ವಿಡಿಯೋ ವೈರಲ್

ಈ ಮೊದಲು ರಾನು ಅವರ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ರಾನು ನಟಿ ಪ್ರಿಯಾಂಕಾ ಚೋಪ್ರಾ ಅವರ ‘ಫ್ಯಾಶನ್’ ಚಿತ್ರದ ಹಾಡಿಗೆ ಮೊದಲ ಬಾರಿಗೆ ರ‍್ಯಾಂಪ್‌ ವಾಕ್ ಮಾಡಿದ್ದರು. ವಿಡಿಯೋದಲ್ಲಿ ರಾನು ರ‍್ಯಾಂಪ್‌ ವಾಕ್ ಮಾಡುತ್ತಾ ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ರಾನು ಅವರ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿತ್ತು. ಇದ್ದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

ರಾನು ಈ ವಿಡಿಯೋದಲ್ಲಿ ಡಿಸೈನರ್ ಜೊತೆ ರ‍್ಯಾಂಪ್‌ ವಾಕ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾನು ಪೀಚ್ ಬಣ್ಣದ ಲೆಹೆಂಗಾ ಧರಿಸಿ ಜೊತೆಗೆ ಹೆಚ್ಚು ಗಾತ್ರದ ಆಭರಣಗಳನ್ನು ಧರಿಸಿದ್ದರು. ರಾನು ತಮ್ಮ ಮೇಕಪ್‍ನಿಂದಾಗಿ ಹೆಚ್ಚು ಟ್ರೋಲ್ ಆಗುತ್ತಿದ್ದು, ಅವರ ಮೇಲೆ ಮಿಮ್ಸಿ ಕೂಡ ಮಾಡಲಾಗುತ್ತಿದೆ.

Click to comment

Leave a Reply

Your email address will not be published. Required fields are marked *