ರಾನು ಕಂಠದಲ್ಲಿ ಮತ್ತೊಂದು ಹೊಸ ಹಾಡು ತಂದ ಹಿಮೇಶ್

Public TV
2 Min Read
Ranu

ಮುಂಬೈ: ಬಾಲಿವುಡ್‍ಗೆ ಎಂಟ್ರಿಕೊಟ್ಟಿರುವ ರಾನು ಮೊಂಡಲ್ ಅವರಿಂದ ನಾಯಕ ಹಿಮೇಶ್ ರಶ್ಮೀಯಾ ಮತ್ತೊಂದು ಹೊಸ ಹಾಡನ್ನು ಹಾಡಿಸಿದ್ದಾರೆ.

ರಾನು ಹೊಸ ಹಾಡು ಹಾಡುತ್ತಿರುವ ವಿಡಿಯೋವನ್ನು ಹಿಮೇಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಹಾಡಿನ ನಿರ್ಮಾಣ ಪ್ರಗತಿಯಲ್ಲಿದೆ. ರಾನು ಅವರ ಮುಖದಲ್ಲಿ ನಿಷ್ಕಲ್ಮಶ ನಗುವನ್ನು ತಂದ ಜನರಿಗೆ ಧನ್ಯವಾದಗಳು. ಪ್ರತಿ ಹಾಡಿನೊಂದಿಗೆ ಅವರ ಬಹುಮುಖತೆ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತಾ ಹೋಗುತ್ತಿದೆ. ಅಭಿಮಾನಿಗಳಿಗೆ ಗಣೇಶ ಚತುರ್ಥಿಯ ಶುಭಾಶಯಗಳು ಎಂದ ಬರೆದುಕೊಂಡಿದ್ದಾರೆ.

ಈ ಹಿಂದೆ ಹಿಮೇಶ್ ರೇಶ್ಮಿಯಾ ಅವರು ತಮ್ಮ ಮುಂಬರುವ `ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ನೀಡಿದ್ದರು. ರಾನು ಅವರು ಈ ಚಿತ್ರದ `ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ವರದಿಗಳ ಪ್ರಕಾರ ರಾನು ಅವರು ಈ ಹಾಡು ಹಾಡಿದ್ದಕ್ಕೆ ಹಿಮೇಶ್ ಅವರಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ನೀಡಿದ್ದರು. ಆದರೆ ರಾನು ಈ ಹಣವನ್ನು ಪಡೆಯಲು ನಿರಾಕರಿಸಿದ್ದು, ಹಿಮೇಶ್ ಅವರು ಬಲವಂತವಾಗಿ ಈ ಹಣವನ್ನು ನೀಡಿದ್ದಾರೆ ಎಂದು ವರದಿಯಾಗಿತ್ತು.

https://www.instagram.com/p/B16GjPEjxCT/

ರಾನು ಅವರು ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಜೀವನದ ಬಗ್ಗೆ ಹೇಳಿಕೊಂಡಿದ್ದರು. `ನಾನು ಫುಟ್‍ಪಾತ್‍ನಲ್ಲಿ ಹುಟ್ಟಿಲ್ಲ. ನಾನು ಉತ್ತಮ ಕುಟುಂಬಕ್ಕೆ ಸೇರಿದವಳು. ಆದರೆ ಅದು ನನ್ನ ಹಣೆಬರಹ. ನಾನು ಕೇವಲ ಆರು ತಿಂಗಳ ಮಗುವಾಗಿದ್ದಾಗ ನನ್ನ ಹೆತ್ತವರಿಂದ ಬೇರ್ಪಟ್ಟಿದ್ದೇನೆ. ನಾನು ಮದುವೆಯ ನಂತರ ಪಶ್ಚಿಮ ಬಂಗಾಳದಿಂದ ಮುಂಬೈಗೆ ಸ್ಥಳಾಂತರಗೊಂಡೆನು ಎಂದು ಹೇಳಿದ್ದರು.

ಅಷ್ಟೇ ಅಲ್ಲದೆ ತಮ್ಮ ಪತಿ ಬಾಲಿವುಡ್ ಸ್ಟಾರ್ ಫಿರೋಜ್ ಖಾನ್ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಅವರ ಮಗ ಫರ್ದೀನ್ ಆ ಸಮಯದಲ್ಲಿ ಕಾಲೇಜು ಒದುತ್ತಿದ್ದರು, ಅವರ ಕುಟುಂಬ ಸದಸ್ಯರಂತೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದರು.

ranu mandal 3

ನಮಗೆ ಮನೆ ಇತ್ತು, ಆದರೆ ಅದನ್ನು ನಿರ್ವಹಿಸಲು ಜನರು ಬೇಕು. ಒಂಟಿಯಾಗಿ ಹಲವು ದಿನದಿಂದ ಬದುಕಿದ್ದೇನೆ. ನಾನು ತುಂಬಾ ಕಷ್ಟಪಟ್ಟಿದ್ದೇನೆ ಆದರೆ ಯಾವಾಗಲೂ ದೇವರನ್ನು ನಂಬುತ್ತೇನೆ. ಹಿಂದೆ ನಾನು ಸಂದರ್ಭಗಳಿಗೆ ಅನುಗುಣವಾಗಿ ಹಾಡುತ್ತಿದ್ದೆನು. ಆದರೆ ನನಗೆ ಯಾರು ಕೂಡ ಅವಕಾಶ ನೀಡಿಲ್ಲ ಎಂದು ಕಷ್ಟವನ್ನು ಹೇಳಿಕೊಂಡಿದ್ದರು.

ರೈಲ್ವೇ ನಿಲ್ದಾಣದಲ್ಲಿ `ಎಕ್ ಪ್ಯಾರ್ ಕಾ ನಗ್ಮ’ ಎಂದು ಹಾಡಿ ರಾನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದರು. ಬಳಿಕ ಅವರಿಗೆ ಖ್ಯಾತ ಗಾಯಕ ಹಿಮೇಶ್ ರೆಶ್ಮೀಯ ಅವರು ತಮ್ಮ ಚಿತ್ರದಲ್ಲಿ `ತೇರಿ ಮೇರಿ ಕಹಾನಿ’ ಎಂದು ಹಾಡಲು ಅವಕಾಶ ಕೊಟ್ಟರು. ಈ ಹಾಡನ್ನು ರಾನು ಅವರು ರೆಕಾರ್ಡಿಂಗ್ ಮಾಡುತ್ತಿದ್ದ ವಿಡಿಯೋ ತುಣುಕನ್ನು ಹಿಮೇಶ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ಎಲ್ಲೆಡೆ ಸಖತ್ ವೈರಲ್ ಆಗಿತ್ತು.

ranu mandal

Share This Article
Leave a Comment

Leave a Reply

Your email address will not be published. Required fields are marked *