ಮುಂಬೈ: ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡುವ ಮೂಲಕ ಬಾಲಿವುಡ್‍ಗೆ ರಾನು ಮೊಂಡಲ್ ಎಂಟ್ರಿ ಕೊಟ್ಟಿದ್ದಾರೆ. ರಾನು ಅವರ ಮೊದಲ ಹಾಡಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ಸಿಕ್ಕಿದ್ದು, ಇದನ್ನು ಅವರು ನಿರಾಕರಿಸಿದ್ದಾರೆ. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ಬಲವಂತವಾಗಿ ಆ ಹಣವನ್ನು ರಾನು ಅವರಿಗೆ ನೀಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಹಿಮೇಶ್ ರೇಶ್ಮಿಯಾ ಅವರು ತಮ್ಮ ಮುಂಬರುವ `ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ನೀಡಿದ್ದರು. ರಾನು ಅವರು ಈ ಚಿತ್ರದ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ವರದಿಗಳ ಪ್ರಕಾರ ರಾನು ಅವರು ಈ ಹಾಡು ಹಾಡಿದ್ದಕ್ಕೆ ಹಿಮೇಶ್ ಅವರಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ರಾನು ಈ ಹಣವನ್ನು ಪಡೆಯಲು ನಿರಾಕರಿಸಿದ್ದು, ಹಿಮೇಶ್ ಅವರು ಬಲವಂತವಾಗಿ ಈ ಹಣವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ
ರಾನು ಮೊದಲು ತಮ್ಮ ಸಂಭಾವನೆ ಪಡೆಯಲು ನಿರಾಕರಿಸುತ್ತಿದ್ದರು. ಈ ವೇಳೆ ಹಿಮೇಶ್ ಅವರು, ನೀವು ಬಾಲಿವುಡ್‍ನಲ್ಲಿ ಸೂಪರ್ ಸ್ಟಾರ್ ಆಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹಣವನ್ನು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಕೂಡ ತಮ್ಮ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ನೀಡುತ್ತಾರೆ ಎಂದು ಎಂಬ ಮಾತುಗಳು ಹರಿದಾಡುತ್ತಿದೆ. ಇದನ್ನೂ ಓದಿ: ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ
ಯಾರಿದ್ದು ರಾನು ಮೊಂಡಲ್?
ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಮೊಂಡಲ್ ಅವರ ಈ ವಿಡಿಯೋವನ್ನು `ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿತ್ತು. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದರು. ಇದನ್ನೂ ಓದಿ: 10 ವರ್ಷದ ಬಳಿಕ ರಾನು ಮೊಂಡಲ್ ಭೇಟಿಯಾದ ಮಗಳು