ಮುಂಬೈ: ಸಾಮಾಜಿಕ ಜಾಲತಾಣದಿಂದ ವೈರಲ್ ಆದ ರಾನು ಮೊಂಡಲ್ ಅವರಿಗೆ ಇದೀಗ ಸಿನಿಮಾಗಳಲ್ಲಿ ಹಾಡಲು ಸಾಕಷ್ಟು ಅವಕಾಶಗಳು ಒದಗಿ ಬರುತ್ತಿವೆ. ಬಾಲಿವುಡ್‍ನಲ್ಲಿ ಈಗಾಗಲೇ ಒಂದು ಹಾಡನ್ನು ರೆಕಾರ್ಡ್ ಮಾಡಿದ ರಾನು ಅವರು, ಈಗ ಭೋಜ್‍ಪುರಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಭೋಜ್‍ಪುರಿ ನಟ ಪ್ರದೀಪ್ ಪಾಂಡೆ ಚಿಂಟು ಅವರು ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಈಗ ಕೇಳಿ ಬರುತ್ತಿರುವ ಹೆಸರು ರಾನು ಮೊಂಡಲ್. ಇಡೀ ದೇಶದ ಜನತೆ ಅಲ್ಲದೆ ಭೋಜ್‍ಪುರಿ ಅಭಿಮಾನಿಗಳ ಹೃದಯದಲ್ಲೂ ಅವರು ತಮಗೆ ಜಾಗ ಮಾಡಿಕೊಂಡಿದ್ದಾರೆ. ಅವರ ಹಾಡು ಕೇಳಿ ಸ್ವತಃ ನಾನೇ ಅವರ ಅಭಿಮಾನಿ ಆಗಿದ್ದೇನೆ. ನಾನು ಅಲ್ಲದೆ ನಮ್ಮ ಇಡೀ ಭೋಜ್‍ಪುರಿ ಚಿತ್ರರಂಗ ಕೂಡ ಅವರ ಅಭಿಮಾನಿ ಆಗಿದೆ ಎಂದರು. ಇದನ್ನೂ ಓದಿ: ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ
ಇಡೀ ಭೋಜ್‍ಪುರಿ ಚಿತ್ರರಂಗ ರಾನು ಅವರನ್ನು ಸ್ವಾಗತಿಸಬೇಕು ಎಂದುಕೊಂಡಿದೆ. ನಾನು ಅವರನ್ನು ಹುಡುಕಿ ನನ್ನ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ. ಇದು ನನ್ನ ಇಚ್ಛೆ ಕೂಡ. ಅವರ ಧ್ವನಿ ಒಬ್ಬರ ಹೃದಯವನ್ನು ಮುಟ್ಟುತ್ತದೆ. ಅವರ ಧ್ವನಿಯಲ್ಲಿ ಆತ್ಮ ಇದೆ. ಅವರು ನನ್ನ ಜೊತೆ ಭೋಜ್‍ಪುರಿ ಹಾಡು ಹಾಡಲಿ ಎಂದು ನಾನು ಬಯಸುತ್ತೇನೆ. ಶೀಘ್ರದಲ್ಲೇ ನಾನು ಎಲ್ಲರಿಗೂ ಈ ಸುದ್ದಿಯನ್ನು ನೀಡುತ್ತೇನೆ ಎಂದು ಪ್ರದೀಪ್ ಪಾಂಡೆ ಹೇಳಿದ್ದಾರೆ. ಇದನ್ನೂ ಓದಿ: 10 ವರ್ಷದ ಬಳಿಕ ರಾನು ಮೊಂಡಲ್ ಭೇಟಿಯಾದ ಮಗಳು
ರೈಲ್ವೆ ನಿಲ್ದಾಣದಲ್ಲಿ ಹಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾನು ಅವರು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದರು. ಈ ವಿಷಯವನ್ನು ಸ್ವತಃ ಹಿಮೇಶ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ತಮ್ಮ ಚಿತ್ರದಲ್ಲಿ ರಾನು ಅವರಿಗೆ ಅವಕಾಶ ನೀಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಇದನ್ನೂ ಓದಿ: ಬೇಡ ಎಂದ್ರೂ ರಾನುಗೆ 7 ಲಕ್ಷ ಸಂಭಾವನೆ ನೀಡಿದ ಹಿಮೇಶ್