ಬೆಂಗಳೂರು: ಸೌರಾಷ್ಟ್ರ ಪಂದ್ಯವನ್ನ ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಇಳಿದಿರುವ ಕರ್ನಾಟಕ ತಂಡಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. 6ನೇ ಸುತ್ತಿನ ಪಂದ್ಯದಲ್ಲಿ ರೇಲ್ವೇಸ್ ವಿರುದ್ಧ ಇಂದು ಅದೃಷ್ಟ ಪರೀಕ್ಷೆಗೆ ಕರ್ನಾಟಕ ತಂಡ ಇಳಿಯುತ್ತಿದೆ. ನಾಕೌಟ್ ಗೆ ಲಗ್ಗೆ ಇಡಬೇಕಾದ್ರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕರ್ನಾಟಕ ತಂಡವಿದೆ.
Advertisement
ದೆಹಲಿಯಲ್ಲಿ ಪಂದ್ಯ ನಡೆಯಲಿದ್ದು, ಮದುವೆ ಹಿನ್ನೆಲೆ ಕಳೆದ ಪಂದ್ಯದಿಂದ ದೂರ ಉಳಿದಿದ್ದ ಕರುಣ್ ನಾಯರ್ ಈ ಪಂದ್ಯಕ್ಕೆ ಲಭ್ಯರಿದ್ದಾರೆ. ಗಾಯಾಳು ಆಗಿದ್ದ ಕೆ. ಗೌತಮ್ ಕೂಡ ಈ ಪಂದ್ಯಕ್ಕೆ ಲಭ್ಯರಿದ್ದು, ಕರ್ನಾಟಕ ತಂಡ ಮತ್ತಷ್ಟು ಬಲಿಷ್ಟವಾಗಿದೆ. ಆಡಿರುವ 5 ಪಂದ್ಯಗಳಿಂದ 17 ಅಂಕ ಗಳಿಸಿರುವ ಕರ್ನಾಟಕ ಸದ್ಯ ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಅಗ್ರ 5 ತಂಡ ನಾಕೌಟ್ ಹಂತಕ್ಕೆ ತಲುಪಲಿದ್ದು ಕರ್ನಾಟಕಕ್ಕೆ ಈ ಪಂದ್ಯ ಪ್ರಮುಖವಾಗಿದೆ. 6 ಪಂದ್ಯ ಆಡಿ 13 ಅಂಕ ಗಳಿಸಿರುವ ರೈಲ್ವೇಸ್ ಕೂಡ ಒತ್ತಡದಲ್ಲಿದ್ದು, ಕರ್ನಾಟಕಕ್ಕೆ ತಿರುಗೇಟು ಕೊಡುವ ತವಕದಲ್ಲಿದೆ.
Advertisement
Advertisement
ಇದುವರೆಗೂ ಕರ್ನಾಟಕ ಮತ್ತು ರೈಲ್ವೇಸ್ 9 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಕರ್ನಾಟಕ 5 ಪಂದ್ಯದಲ್ಲಿ ಜಯಗಳಿಸಿ 3 ಪಂದ್ಯ ಡ್ರಾ ಮಾಡಿಕೊಂಡಿದೆ. ರೈಲ್ವೇಸ್ 1 ಪಂದ್ಯ ಮಾತ್ರ ಗೆದ್ದಿದೆ.
Advertisement