BBK 11: ಐಶ್ವರ್ಯಾ, ರಂಜಿತ್‌ ನಡುವೆ ಸಮ್‌ಥಿಂಗ್‌ ಸಮ್‌ಥಿಂಗ್- ‘ಬಿಗ್‌’ ಮನೆಯಲ್ಲಿ ಹೊಸ ಪ್ರೇಮ ಪುರಾಣ

Public TV
2 Min Read
AISHWARYA SHINDOGI

ಪ್ರತಿ ಸೀಸನಲ್ಲೂ‌ ಒಂದಲ್ಲಾ ಒಂದು ಲವ್ ಸ್ಟೋರಿ ಇದ್ದೇ ಇರುತ್ತದೆ. ಈ ಬಾರಿ ಬಿಗ್ ಬಾಸ್‌ ಶೋ (Bigg Boss Kannada 11) ಶುರುವಾದ್ಮೇಲೆ ಕೇಳಬೇಕಾ? ಇದೀಗ ದೊಡ್ಮನೆಯಲ್ಲಿ ಹೊಸ ಪ್ರೇಮ ಪುರಾಣ ಶುರುವಾಗಿದೆ. ಐಶೂ ಕಣ್ನೋಟಕ್ಕೆ ರಂಜಿತ್ ಕಳೆದುಹೋಗಿದ್ದಾರೆ. ಸ್ವರ್ಗ ಬೇಕಾ? ನರಕ ಬೇಕಾ? ಅಂತ ಕೇಳಿದ್ರೆ? ನೀನೇ ಬೇಕು ಅಂತ ಸ್ಪರ್ಧಿ ಐಶ್ವರ್ಯಾ ಸಿಂದೋಗಿಗೆ (Aishwarya Shindogi) ಪ್ರೇಮ ನಿವೇದನೆ ಮಾಡಿದ್ದಾರೆ ರಂಜಿತ್.‌

AISHWARYA

ಕಳೆದ 10 ಸೀಸನ್‌ಗಳಲ್ಲಿ ಅದೆಷ್ಟೋ ಪ್ರೇಮ ಕತೆಗಳು ‘ಬಿಗ್ ಬಾಸ್’ ಮನೆಯಲ್ಲಿ ಶುರುವಾಗಿ ಹೊಸ ಬದುಕಿಗೆ ಮುನ್ನುಡಿ ಬರೆದಿದೆ. ಅದರಲ್ಲಿ ಕೆಲವು ಪ್ರೇಮ ಕತೆಗಳು ಅಂತ್ಯವಾಗಿದ್ದು ಇದೆ. ಈ ಬಾರಿ ಐಶ್ವರ್ಯಾ ಮತ್ತು ರಂಜಿತ್ ಇಬ್ಬರೂ ಮುಂದಿನ ದಿನಗಳಲ್ಲಿ ಜಂಟಿಯಾಗೋ ಲಕ್ಷಣ ಕಾಣುತ್ತಿದೆ. ಐಶ್ವರ್ಯಾರನ್ನು ನೋಡಿ ರಂಜಿತ್ ಫುಲ್ ಫ್ಲ್ಯಾಟ್ ಆಗಿದ್ದಾರೆ. ರಂಜಿತ್ (Ranjith Kumar) ನಾಚಿಕೊಳ್ಳುತ್ತಿರೋ ಪರಿ ನೋಡಿ ಅಣ್ಣಂಗೆ ಲವ್ ಆಗಿದೆ ಅಂತ ಮನೆ ಮಂದಿ ಹಾಡು ಹೇಳಲು ಶುರು ಹಚ್ಚಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಅಂತೀರಾ. ಇಲ್ಲಿದೆ ಸ್ಟೋರಿ ಬಿಗ್‌ ಬಾಸ್‌ ಮನೆಯಲ್ಲಿನ ಲವ್‌ ಸ್ಟೋರಿ.

AISHWARYA SHINDOGI 1

ಬಿಳಿ ಸೀರೆಯುಟ್ಟು ಗೊಂಬೆ ಹಾಗೆ ನಿಂತ ಐಶ್ವರ್ಯಾರನ್ನು ರಂಜಿತ್ ಫುಲ್ ಫಿದಾ ಆಗಿದ್ದಾರೆ. ತಿಂಡಿ ಬೇಕಾ ಅಂತ ಐಶ್ವರ್ಯಾ ಕೇಳಿದ್ದಕ್ಕೆ, ಏನು ಬೇಡ ನೀವೇ ಬೇಕು ಅಂತ ಐಶ್ವರ್ಯಾಗೆ ರಂಜಿತ್ ಕಾಳು ಹಾಕಲು ಶುರು ಮಾಡಿದ್ದಾರೆ. ಸ್ವರ್ಗ ಬೇಕಾ? ನರಕ ಬೇಕಾ? ಅಂತ ಕೇಳಿದ್ರೆ, ನೀವೇ ಬೇಕು ಅಂತ ನಟಿಗೆ ಐಸ್ ಇಡ್ತಿದ್ದಾನೆ ರಂಜಿತ್. ಇದನ್ನೆಲ್ಲಾ ನೋಡಿ ಮನೆ ಮಂದಿ ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದೆ ಅಂತಲೇ ಇಬ್ಬರನ್ನೂ ಆಡಿಕೊಳ್ಳಲು ಶುರು ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ

ಬಿಗ್ ಬಾಸ್ ಮನೆಯಲ್ಲಿ ಶುರು ಆಗೋ ಪ್ರೇಮ ಕತೆಗಳು ಪರ್ಮನೆಂಟ್ ಆಗಿರೋಲ್ಲ. ಎಲ್ಲರೂ ಅರವಿಂದ್ ಮತ್ತು ದಿವ್ಯಾ ಉರುಡುಗ ಜೋಡಿ ಆಗೋಕೆ ಆಗೋದಿಲ್ಲ ಅಲ್ವಾ? ಅದೇನೇ ಆಗಿರಲಿ ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಶೋಗೆ ಅಷ್ಟೇ ಈ ಪ್ರೀತಿ, ಪ್ರೇಮ ಸೀಮಿತ ಆಗಿರುತ್ತಾ? ಆಟ ಮುಗಿದ್ಮೇಲೂ ಪ್ರೀತಿ ಪಯಣ ಮುಂದುವರೆಯುತ್ತಾ? ಅಂತ ಕಾದುನೋಡಬೇಕಿದೆ.

Share This Article