ಬೆಂಗಳೂರು/ಉಡುಪಿ: ತಂದೆ-ತಾಯಿಗೆ ವಯಸ್ಸಾಯ್ತು ಅಂತಾ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿರುವ ಕಾರಣ ವೃದ್ಧಾಶ್ರಮಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಇಲ್ಲೊಬ್ಬ 23ರ ತರುಣ ವೃದ್ಧಾಶ್ರಮವನ್ನ ಕಟ್ಟಿ ಬೀದಿಯಲ್ಲಿ ಬಿದ್ದಿದ್ದವರನ್ನ ತಂದು ನೋಡಿಕೊಳ್ಳತ್ತಿದ್ದಾರೆ.
Advertisement
ಮೂಲತಃ ಕುಂದಾಪುರದವರಾದ ರಂಜಿತ್ ಶೆಟ್ಟಿ (Ranjith Shetty Kundapura) ಬಾಲ್ಯದಲ್ಲೇ ಮನೆ ಬಿಟ್ಟು ಬೆಂಗಳೂರಿಗೆ ಬಂದು ನಾನಾ ಕಡೆ ಕೆಲಸ ಮಾಡಿ, ಬೀದಿಯಲ್ಲೇ ಜೀವನ ಕಳೆದ್ದಿದ್ದರು. ಆದರೆ ತಾನು ಆ ದಿನಗಳಲ್ಲಿ ಬೀದಿಯಲ್ಲಿ ಅನುಭವಿಸಿದ್ದ ನೋವು, ಹಸಿವು, ಸಂಕಟ ಯಾರಿಗೂ ಬರಬಾರದು ಅನ್ನೋ ಉದ್ದೇಶದಿಂದ ಈಗ ತಾನೇ ಒಂದು ವೃದ್ದಾಶ್ರಮವನ್ನ ನಡೆಸುತ್ತಿದ್ದಾರೆ.
Advertisement
Advertisement
ಬೆಂಗಳೂರಿನ ಕೆಂಗೇರಿ (Kengeri Bengaluru) ಬಳಿಯ ಚಿಕ್ಕಬಸ್ತಿಯಲ್ಲಿ ಒಂದು ಮನೆ ಮಾಡಿ ಸರಿಸುಮಾರು ಎರಡೂವರೆ ವರ್ಷಗಳಿಂದ ವಯೋವೃದ್ಧರ ಆರೈಕೆ ಮಾಡುತ್ತಿದ್ದಾರೆ. ತಮ್ಮ ಆಶ್ರಮಕ್ಕೆ ‘ಆರೈಕೆ’ (Aaraike) ಎಂದೇ ಹೆಸರಿಟ್ಟಿರೋ ಅವರು ಈಗ ತನ್ನ ಸಂಪಾದನೆಯನ್ನ ಅನಾಥರಾಗಿ ರಸ್ತೆಯಲ್ಲಿ ಇರೋ ವಯೋವೃದ್ದರಿಗೆ ಮೀಸಲಿಟ್ಟಿದ್ದಾರೆ. ತನ್ನದೇ ಆದ ಬೇಕರಿ ಮತ್ತು ಹೋಟಲ್ ಉದ್ಯೋಗ ನಡೆಸುತ್ತಿರುವ ರಂಜಿತ್ ದುಡಿಮೆಯಲ್ಲಿ ಬಂದ ಲಾಭವನ್ನ ಆಶ್ರಮಕ್ಕೆ ಬಳಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್‍ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ
Advertisement
ಒಟ್ಟಿನಲ್ಲಿ 23 ವರ್ಷಕ್ಕೆ ಹೀಗೆ ಜನರ ಸೇವೆ ಮಾಡಬೇಕು ಅನ್ನೋ ಮನಸ್ಸು ಯಾರಿಗೆ ಬರುತ್ತೆ ಹೇಳಿ, ತಂದೆ ತಾಯಿಯನ್ನೇ ನೋಡಿಕೊಳ್ಳೋದು ಕಷ್ಟ ಅಂತದ್ರಲ್ಲಿ ಈ ಆರೈಕೆ ಕೇಂದ್ರದಲ್ಲಿ ಬರೋಬ್ಬರಿ 40 ಜನರನ್ನ ರಂಜಿತ್ ತಮ್ಮ ಸ್ವಂತ ತಂದೆತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ.
Web Stories