ಮುಂಬೈ: ಮುಂಬೈ ಮತ್ತು ಉತ್ತರಾಖಂಡ ನಡುವಿನ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ದಾಖಲೆಯ 725 ರನ್‍ಗಳ ಜಯ ಸಾಧಿಸಿದೆ.
Advertisement
ಮುಂಬೈ ನೀಡಿದ 795 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಉತ್ತರಾಖಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 69 ರನ್‍ಗಳಿಗೆ ಆಲೌಟ್ ಆಯಿತು. ಈ ಮೂಲಕ ಮುಂಬೈ ತಂಡ 725 ರನ್‍ಗಳ ಬೃಹತ್ ಜಯ ದಾಖಲಿಸಿತು. ಈ ಹಿಂದೆ 1953-54ರಲ್ಲಿ ಒಡಿಶಾ ವಿರುದ್ಧ ಬಂಗಾಳ ತಂಡ 540 ರನ್‍ಗಳ ಬೃಹತ್ ಜಯ ದಾಖಲಿಸಿತ್ತು. ಈ ದಾಖಲೆಯನ್ನು ಇದೀಗ ಮುಂಬೈ ತಂಡ ಮುರಿದು ನೂತನ ದಾಖಲೆ ನಿರ್ಮಿಸಿದೆ. ಇದನ್ನೂ ಓದಿ: ಕೊಹ್ಲಿಯ ದಾಖಲೆಯ ರನ್ ಶಿಖರವನ್ನು ಪುಡಿಗಟ್ಟಿದ ಬಾಬರ್ ಅಜಾಮ್
Advertisement
???? ???????????????????????? ????
A milestone in First-Class cricket as 9⃣ Bengal batters register 5⃣0⃣-plus scores in an innings. ???? ????
The team achieved this feat during the @Paytm #RanjiTrophy #QF1 clash against Jharkhand. ???? ???? #BENvJHA
Follow the match ▶️ https://t.co/UDFkFRkMjB pic.twitter.com/ahW6Y3O7Gf
— BCCI Domestic (@BCCIdomestic) June 8, 2022
Advertisement
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಬಂಗಾಳ ತಂಡ ನೂತನ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಬಂಗಾಳ ತಂಡದ ಎಲ್ಲಾ ಒಂಬತ್ತು ಬ್ಯಾಟ್ಸ್‌ಮ್ಯಾನ್‌ಗಳು ಅರ್ಧಶತಕ ಸಿಡಿಸುವ ಮೂಲಕ 129 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ನೂತನ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಲಂಕಾ T20, ಏಕದಿನ ಕ್ರಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ನಾಯಕಿ
Advertisement