ಮೈಸೂರು: ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಮಹಾರಾಷ್ಟ್ರ ವಿರುದ್ಧ ಪಂದ್ಯದಲ್ಲಿ ಕರ್ನಾಟಕ 7 ವಿಕೆಟ್ ಜಯ ಪಡೆದಿದೆ.
ಗೆಲ್ಲಲು 184 ರನ್‍ಗಳ ಟಾರ್ಗೆಟ್ ಪಡೆದ ಕರ್ನಾಟಕ 70.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿ ಗೆಲುವು ಪಡೆಯಿತು.
Advertisement
Karnataka Won by 7 Wicket(s) #KARvMAH @paytm #RanjiTrophy Scorecard:https://t.co/ke4QEPehFJ
— BCCI Domestic (@BCCIdomestic) December 1, 2018
Advertisement
ಕರ್ನಾಟಕ 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿತ್ತು. ಇಂದು ಗೆಲ್ಲಲು 130 ರನ್ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿತು. ಆರಂಭಿಕರಾದ ದೇವದತ್ತ ಪಡುಕ್ಕಲ್ 77 ರನ್, ಡಿ. ನಿಶ್ಚಲ್ 61 ರನ್ ಸಿಡಿಸಿ ಭರ್ಜರಿ ಜೊತೆಯಾಟ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 121 ರನ್ ಪೇರಿಸಿತ್ತು. ಬಳಿಕ ಕೌನೇನ್ ಅಬ್ಬಾಸ್ 34 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ತಲಪುವಂತೆ ಮಾಡಿದರು.
Advertisement
ಮಹಾರಾಷ್ಟ್ರ ತಂಡವನ್ನು ಮೊದಲ ಇನ್ನಿಂಗ್ಸ್ ನಲ್ಲಿ 113 ರನ್ ಗಳಿಗೆ ಆಲೌಟ್ ಮಾಡಿದ್ದ ಕರ್ನಾಟಕ 73 ರನ್ ಮುನ್ನಡೆ ಪಡೆದು 86 ರನ್ ಗಳಿಗೆ ಆಲೌಟ್ ಆಗಿದ್ದತ್ತು. 2ನೇ ಇನ್ನಿಂಗ್ಸ್ ನಲ್ಲೂ ಭರ್ಜರಿ ಬೌಲಿಂಗ್ ದಾಳಿ ನಡೆಸಿದ್ದ ವಿನಯ್ ಬಳಗ 256 ರನ್ ಗಳಿಗೆ ಎದುರಾಳಿಗಳನ್ನು ಕಟ್ಟಿಹಾಕಿತ್ತು.
Advertisement
121-runs partnership between @devdpd07 and Dega Nischal led to this firm chase. Great temperament shown by Devdutt in his debut game! pic.twitter.com/JeBgbLQBrJ
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) December 1, 2018
ಕರ್ನಾಟಕ ಮಹಾರಾಷ್ಟ್ರದ ವಿರುದ್ಧ ಗೆಲುವಿನೊಂದಿಗೆ 6 ಅಂಕಗಳನ್ನು ಪಡೆದಿದ್ದು, ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು. ಇದಕ್ಕು ಮುನ್ನ ಎರಡು ಪಂದ್ಯಗಳು ಡ್ರಾ ಮಾಡಿಕೊಂಡಿದ್ದು, ಒಟ್ಟಾರೆ 12 ಅಂಕಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ರನ್ ರೇಟ್ ಆಧಾರದ ಮೇಲೆ ಎ ಗುಂಪಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಸೌರಾಷ್ಟ್ರ ಕೂಡ 12 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದು, ಗುಜರಾತ್ 10 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.
ಸಂಕ್ಷೀಪ್ತ ಸ್ಕೋರ್:
ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ – 119 ರನ್ ಆಲೌಟ್ (39.4 ಓವರ್)
ಕರ್ನಾಟಕ ಮೊದಲ ಇನ್ನಿಂಗ್ಸ್ – 186 ರನ್ ಆಲೌಟ್ (84.2 ಓವರ್)
ಮಹಾರಾಷ್ಟ್ರ 2ನೇ ಇನ್ನಿಂಗ್ಸ್ – 256 ರನ್ ಆಲೌಟ್ (97 ಓವರ್)
ಕರ್ನಾಟಕ 2ನೇ ಇನ್ನಿಂಗ್ಸ್ – 184 ರನ್, 3 ವಿಕೆಟ್ (70.2 ಓವರ್)
ಫಲಿತಾಂಶ : ಕರ್ನಾಟಕಕ್ಕೆ 7 ವಿಕೆಟ್ ಜಯ
Kudos to team Karnataka.. First win of the season.. well done boys ???????? youngsters showed great character in a difficult wicket.. long way to go boys ???????? pic.twitter.com/nxwindvQDJ
— Vinay Kumar R (@Vinay_Kumar_R) December 1, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv