ಬೆಂಗಳೂರು: ನೌಕೌಟ್ ಹಂತಕ್ಕೆ ತಲುಪುವ ನಿರೀಕ್ಷೆಯಲ್ಲಿರುವ ಕರ್ನಾಟಕಕ್ಕೆ ಸೌರಾಷ್ಟ್ರ ತಂಡ ಶಾಕ್ ನೀಡಿದೆ.
ರಾಜ್ ಕೋಟ್ ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಸೌರಾಷ್ಟ್ರ ಮೊದಲ ದಿನ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿ ಕರ್ನಾಟಕ ತಂಡಕ್ಕೆ ಆಘಾತ ನೀಡಿದೆ. ಭಾರತ ಟೆಸ್ಟ್ ತಂಡದ ಆಟಗಾರ ಚೇತೇಶ್ವರ ಪೂಜಾರ ಅದ್ಭುತ ಬ್ಯಾಟಿಂಗ್ ನಡೆಸಿ ಸೌರಾಷ್ಟ್ರ ತಂಡ ಮುನ್ನಡೆಗೆ ಕಾರಣರಾದ್ರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ ತಂಡಕ್ಕೆ ಪೂಜಾರ ಮತ್ತು ಶೆಲ್ಡನ್ ಜಾಕ್ಸನ್ ಭದ್ರ ಬುನಾದಿ ಹಾಕಿಕೊಟ್ರು. ಸೌರಾಷ್ಟ್ರ ಆರಂಭಿಕ ಆಟಗಾರರು ಬೇಗನೆ ಫೆವಿಲಿನ್ ಕಡೆ ಮುಖ ಮಾಡಿದ್ರು. ಬಳಿಕ ಪೂಜಾರ ಮತ್ತು ಜಾಕ್ಸನ್ ತಂಡಕ್ಕೆ ಆಸರೆಯಾದ್ರು.
ಭರ್ಜರಿ 266 ರನ್ ಜೊತೆಯಾಟವಾಡಿದ್ದಾರೆ. ಪೂಜಾರ ಅಜೇಯ 162 ರನ್ ಗಳಿಸಿದ್ರೆ ಜಾಕ್ಸನ್ ಅಜೇಯ 99 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪೂಜಾರ ಹಾಗೂ ಜಾಕ್ಸನ್ ರನ್ನ ಕಟ್ಟಿ ಹಾಕುವಲ್ಲಿ ಕರ್ನಾಟಕರ ಬೌಲರ್ ಗಳು ವಿಫಲರಾದ್ರು.
ಪೂಜಾರ ಭರ್ಜರಿ 17 ಬೌಂಡರಿ, 1 ಸಿಕ್ಸರ್ ಬಾರಿಸಿ ಕರ್ನಾಟಕದ ಬೌಲರ್ ಗಳನ್ನ ಚೆಂಡಾಡಿದ್ರು. ಕರ್ನಾಟಕದ ಪರ ಸುಚಿತ್ ಎರಡು ವಿಕೆಟ್ ಕಬಳಿಸಿದರು. ಇನ್ನೂ 3 ದಿನ ಆಟ ಬಾಕಿ ಇದ್ದು ಪೂಜಾರ, ಜಾಕ್ಸನ್ ತನ್ನ ಬೇಗ ಔಟ್ ಮಾಡಿದ್ರೆ ಮಾತ್ರ ಕರ್ನಾಟಕ ತಂಡಕ್ಕೆ ಗೆಲುವು ಸಾಧ್ಯ.