– ಹಿಟ್‍ಮ್ಯಾನ್, ಗವಾಸ್ಕರ್ ಪಟ್ಟಿಗೆ ಸೇರಿದ ಖಾನ್
– 633 ನಿಮಿಷದಲ್ಲಿ 30 ಬೌಂಡರಿ, 8 ಸಿಕ್ಸರ್‌ನಿಂದ 301 ರನ್
ಮುಂಬೈ: ಯುವ ಆಟಗಾರ ಸರ್ಫರಾಜ್ ಖಾನ್ ಅವರ ತ್ರಿಶತಕದಿಂದ ಮುಂಬೈ ತಂಡವು ಉತ್ತರ ಪ್ರದೇಶ ನೀಡಿದ್ದ 625 ರನ್‍ಗಳ ಗುರಿಯನ್ನು ಹಿಂದಿಕ್ಕಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಣಜಿ ಟ್ರೋಫಿಯ ಭಾಗವಾಗಿ ಉತ್ತರ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಸರ್ಫರಾಜ್ ಖಾನ್ ತ್ರಿಶತಕ ಸಾಧನೆ ಮಾಡಿದ್ದಾರೆ. 633 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಸರ್ಫರಾಜ್ ಔಟಾಗದೆ 301 ರನ್ (391 ಎಸೆತ, 30 ಬೌಂಡರಿ, 8 ಸಿಕ್ಸರ್) ಸಿಡಿಸಿದರು. ಈ ಮೂಲಕ ಉತ್ತರ ಪ್ರದೇಶದ ವಿರುದ್ಧ ಮುಂಬೈ ತಂಡವು 3 ಅಂಕ ಸಂಪಾದಿಸಿಕೊಂಡಿದೆ.
Advertisement
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಉತ್ತರ ಪ್ರದೇಶ ತಂಡವು ಅಕ್ಷದೀಪ್ ನಾಥ್ 115 ರನ್ ಹಾಗೂ ಉಪೇಂದ್ರ ಯಾದವ್ ಅವರ 203 ರನ್‍ನಿಂದ 159.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 625 ರನ್‍ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು. ಈ ಬೃಹತ್ ರನ್‍ಗಳ ಮೊತ್ತವನ್ನು ಬೆನ್ನಟ್ಟಿದ ಮುಂಬೈ 16 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಆದರೆ ಭುಪಿನ್ ಲವಣಿ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮಾಡಿದರು. ಆದರೆ 43 ಗಳಿಸಿದ್ದಾಗ ವಿಕೆಟ್ ಒಪ್ಪಿಸಿದ ಪೆವಿಲಿಯನ್‍ಗೆ ತೆರಳಿದರು.
Advertisement
ಮುಂಬೈ ಬ್ಯಾಟ್ಸ್‌ಮನ್ ಜೀತಂದ್ರ ತಾಮೊರೆ 51 ರನ್, ಸಿದ್ಧಾರ್ಥ್ ಲಾಡ್ 98 ರನ್ ಗಳಿಸಿದರು. ಬಳಿಕ ಆರನೇ ಕ್ರಮಾಂಕದಲ್ಲಿ ಮೈದಾಕ್ಕಿಳಿದ ಸರ್ಫರಾಜ್ ಖಾನ್ ಔಟಾಗದೆ 301 ಗಳಿಸಿದರು. ಆದಿತ್ಯಾ ತಾರೆ 97 ರನ್, ಮುಲಾನಿ 65 ರನ್‍ಗಳ ಸಹಾಯದಿಂದ ಮುಂಬೈ 625 ರನ್‍ಗಳ ಬೃಹತ್ ಮೊತ್ತವನ್ನು ಹಿಂದಿಕ್ಕಿತು. ಬಳಿಕ 166.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 688 ರನ್‍ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿತು. ಈ ಮೂಲಕ 63 ರನ್‍ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ 3 ಅಂಕ ಸಂಪಾದಿಸಿತು.
Advertisement
Sarfaraz Khan 301 not out in 391 balls (S/r 76.98), 30 fours, 8 sixes
50 in 50 Balls (50b)
100 in 107 Balls (57b)
150 in 189 Balls (82b)
200 in 277 Balls (88b)
250 in 345 Balls (68b)
300 in 388 Balls (43b)#RanjiTrophy
— Mohandas Menon (@mohanstatsman) January 22, 2020
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೈದಾಕ್ಕಿಳಿದು ತ್ರಿಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಹಾಗೂ ತ್ರಿಶಕ ಸಿಡಿಸಿದ ಮುಂಬೈನ 7ನೇ, ದೇಶದ 45ನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಸರ್ಫರಾಜ್ ಖಾನ್ ಪಾತ್ರರಾದರು.
ಸರ್ಫರಾಜ್ ಖಾನ್ ಮುಂಬೈ ಪರ ತ್ರಿಶತಕ ಗಳಿಸಿದ ಏಳನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವಾಸಿಮ್ ಜಾಫರ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಅವರು 301 ರನ್ ಮತ್ತು ಔಟಾಗದೆ 314 ರನ್ ಗಳಿಸಿದ್ದರು. ರೋಹಿತ್ ಶರ್ಮಾ ಔಟಾಗದೆ 309 ರನ್, ಅಜಿತ್ ವಾಡೆಕರ್ 323 ರನ್, ಸುನಿಲ್ ಗವಾಸ್ಕರ್ 340 ರನ್, ವಿಜಯ್ ಮರ್ಚೆಂಟ್ ಔಟಾಗದೆ 359 ಮತ್ತು ಸಂಜಯ್ ಮಂಜ್ರೇಕರ್ 377 ರನ್ ಗಳಿಸಿದ್ದರು.
WATCH: The Sarfaraz Khan redemption story ????????
Mumbai to Uttar Pradesh and back: Sarfaraz Khan recounts his journey to a special triple ton and how he chose runs over food. ???????? @paytm #RanjiTrophy #MUMvUP
Full video ▶️▶️https://t.co/YB70HlkvSb pic.twitter.com/ZhGwucSwAh
— BCCI Domestic (@BCCIdomestic) January 22, 2020