ಮೈಸೂರು: ರಣಜಿ ಕ್ರಿಕೆಟ್‍ಗೂ ಸೂರ್ಯ ಗ್ರಹಣದ ಎಫೆಕ್ಟ್ ತಟ್ಟಿದ್ದು, ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯವನ್ನು ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಒಂದೂವರೆ ತಾಸು ತಡವಾಗಿ ಆರಂಭಿಸಲಾಯಿತು.
ನಿನ್ನೆಯಿಂದ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ನಡುವಿನ ರಣಜಿ ಪಂದ್ಯ ಆರಂಭವಾಗಿದೆ. ಮೊದಲ ದಿನದಾಟದಲ್ಲಿ ಬ್ಯಾಟಿಂಗ್ ನಡೆಸಿದ ಕರ್ನಾಟಕ 166 ರನ್ ಗಳಿಗೆ ಆಲೌಟ್ ಆಯ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಹಿಮಾಚಲ ಪ್ರದೇಶ 3 ವಿಕೆಟ್‍ಗೆ 29 ರನ್ ಗಳಿಸಿದ್ದ ವೇಳೆ ಮಂದ ಬೆಳಕಿನ ಕಾರಣ ಆಟವನ್ನು ಅಂತ್ಯಗೊಳಿಸಲಾಗಿತ್ತು.
Advertisement
Advertisement
ಇಂದು ಬೆಳಗ್ಗೆ 9.30ಕ್ಕೆ 2ನೇ ದಿನದ ಪಂದ್ಯ ಆರಂಭವಾಗಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಗ್ರಹಣ ಇರುವ ಕಾರಣ ಪಂದ್ಯವನ್ನ 1 ಗಂಟೆ 45 ನಿಮಿಷ ಮುಂದೂಡಲಾಗಿತ್ತು. ಗ್ರಹಣದ ಸಂದರ್ಭದಲ್ಲಿ ಬೆಳಕು ಕಡಮೆ ಇರುವ ಕಾರಣ ಹಾಗೂ ಆಟಗಾರರ ಆರೋಗ್ಯದ ಮೇಲಿನ ಕಾಳಜಿಯಿಂದ ಕೆಸಿಎ ಪಂದ್ಯ ಆರಂಭದ ಸಮಯವನ್ನು ಮುಂದೂಡಿತ್ತು. ಗ್ರಹಣ ಅಂತ್ಯವಾದ ಬಳಿಕ 2ನೇ ದಿನದಾಟ ಆರಂಭವಾಯಿತು. 29 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಹಿಮಾಚಲ ಪ್ರದೇಶ ತಂಡ ಬ್ಯಾಟಿಂಗ್ ಆರಂಭಿಸಿದೆ.