ಬೆಂಗಳೂರಿಗೆ ‌ಮಯಾಂಕ್‌ ವಾಪಸ್-‌ ಮಾತನಾಡಲು ಆಗ್ತಿಲ್ಲವೆಂದ ಕ್ರಿಕೆಟಿಗ!

Public TV
1 Min Read
MAYANK

ಚಿಕ್ಕಬಳ್ಳಾಪುರ: ಅಸ್ವಸ್ಥಗೊಂಡಿದ್ದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ (Mayank Agarwal) ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ವಿಮಾನದಲ್ಲಿ ಪ್ರಯಾಣ ಮಾಡುವಾಗ ತೀವ್ರ ಅಸ್ವಸ್ಥತೆಗೆ ಗುರಿಯಾಗಿದ್ದ ಮಯಾಂಕ್‌ ಅವರಿಗೆ ಅಗರ್ತಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಇಂದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

MAYANK AGARWAL

ಇಂದು ಸಂಜೆ ಬೆಂಗಳೂರಿನ ವಿಮಾನನಿಲ್ದಾಣಕ್ಕೆ ಬಂದಿಳಿದ ಮಯಾಂಕ್‌ ಅವರು ಗಂಟಲು ಸಮಸ್ಯೆಯಿಂದ ಸದ್ಯ ಮಾತನಾಡಲು ಆಗುತ್ತಿಲ್ಲ ಎಂದು ಹೇಳಿ ನೇರವಾಗಿ ಮನೆಗೆ ತೆರಳಿದರು. ಫ್ಯಾಮಿಲಿ ಡಾಕ್ಟರ್ ಸಲಹೆ ಪಡೆದು ಮನೆಯಲ್ಲೇ ಮುಂದಿನ ಟ್ರೀಟ್ಮೆಂಟ್ ಮುಂದುವರಿಕೆಯಾಗಲಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಮಯಾಂಕ್‌ ಅಗರ್ವಾಲ್‌ ಆರೋಗ್ಯ ಸ್ಥಿರ- ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ

ನಡೆದಿದ್ದೇನು..?: ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ರಣಜಿ ಪಂದ್ಯ ಆಡಲೆಂದು ಮಯಾಂಕ್‌ ಅವರು ವಿಮಾನದಲ್ಲಿ ತೆರಳುತ್ತಿದ್ದರು. ಈ ವೇಳೆ ಅವರು ದ್ರವ ಪದಾರ್ಥವನ್ನು ಸೇವಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಮಯಾಂಕ್‌ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಅಗರ್ತಲಾದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇಂದು ಆಸ್ಪತ್ರೆ ಬೆಡ್‌ನಲ್ಲಿ ಮಲಗಿರುವ ಫೋಟೋಗಳನ್ನು ಶೇರ್‌ ಮಾಡಿ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು ಎಂದು ಮಯಾಂಕ್‌ ಬರೆದುಕೊಂಡಿದ್ದಾರೆ. ಇತ್ತ ರಣಜಿ ಟೀಂ ಮ್ಯಾನೇಜರ್‌ ರಮೇಶ್‌ (Ranji Team Manager Ramesh) ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮಯಾಂಕ್‌ ಅಗರ್ವಾಲ್‌ ಆರೋಗ್ಯ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಮಯಾಂಕ್‌ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

Share This Article