ಹಣ ಉಳಿತಾಯಕ್ಕೆ ಅಭಿಮಾನಿಗಳಿಗೆ ಟಿಪ್ಸ್ ಕೊಟ್ಟ ನಟಿ ರಂಜನಿ ರಾಘವನ್

Public TV
1 Min Read
ranjani raghavan

ಬೆಂಗಳೂರು: ಹೊಸ ವರ್ಷಕ್ಕೆ ಹಲವರು ತಮ್ಮದೇ ಆದ ರೆಸಲ್ಯೂಷನ್ ಹಾಕಿಕೊಳ್ಳುತ್ತಿರುತ್ತಾರೆ. ಹೀಗಾಗಿ ಕಿರುತೆರೆ ನಟಿ ರಂಜನಿ ರಾಘವನ್ ಹೊಸ ವರ್ಷದಂದು ಅಭಿಮಾನಿಗಳಿಗೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

FotoJet 1 1

ಹೊಸ ವರ್ಷಕ್ಕೆ ಈ ಐದು ರೆಸಲ್ಯೂಷನ್‍ಗಳನ್ನು ತೆಗೆದುಕೊಂಡ್ರೆ, ನಿಮ್ಮ ಜೇಬಲ್ಲಿ ಹಣ ಯಾವಾಗ್ಲೂ ಇದ್ದೇ ಇರುತ್ತೆ ಏನಂತೀರಿ? ಎಂಬ ಕ್ಯಾಪ್ಷನ್‍ನೊಂದಿಗೆ ರಂಜನಿ ಅವರು ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಟಿಪ್ಸ್ ಅನ್ನೋದು ವಿಶೇಷವಾಗಿದೆ. ಇದನ್ನು ಓದಿ: RRR ಸಿನಿಮಾ ಬಿಡುಗಡೆ ಮುಂದೂಡಿಕೆ ಅಧಿಕೃತ

ಈ ವೀಡಿಯೋದಲ್ಲಿ ಏನಿದೆ?: * ಅನಗತ್ಯವಾದ ವಸ್ತುಗಳನ್ನು ಕೊಳ್ಳುವುದು ಬೇಡ
* ನಮ್ಮ ಆದಾಯದಲ್ಲಿ ಶೇ.10 ಉಳಿತಾಯ ಮಾಡೋಣ
* ಸಾಲದಿಂದ ದೂರವಿರೋಣ
* ಎಲ್ಲಿ ಹಣ ಬರುತ್ತದೆಯೋ ಅಲ್ಲಿ ಹೂಡಿಕೆ ಮಾಡೋಣ
* ಜಿಪುಣರಾಗೋದು ಬೇಡ, ಅದು ಹಣ ಅಷ್ಟೇ

FotoJet 1

ಈ ಐದು ರೆಸಲ್ಯೂಷನ್‍ಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ನಿಮ್ಮನ್ನು ಹಿಂಬಾಲಿಸೋಕೆ ಇದೂ ಒಂದು ಕಾರಣ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ನಾವು ಇದನ್ನು ಪಾಲಿಸುತ್ತೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಟಿ ಕೊಟ್ಟಿರುವ ಸಲಹೆಯನ್ನು ಅಭಿಮಾನಿಗಳು ಮೆಚ್ಚು ಪಾಲಿಸುತ್ತೇವೆ ಎನ್ನುತ್ತಿದ್ದಾರೆ.

Share This Article