ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಗುಡ್‌ ನ್ಯೂಸ್‌ ಕೊಟ್ರು ರಂಜನಿ ರಾಘವನ್

Public TV
1 Min Read
ranjani raghavan 1

‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್ (Ranjani Raghavan) ನಾಯಕಿಯಾಗಿ ಕಿರುತೆರೆ, ಹಿರಿತೆರೆಯಲ್ಲಿ ಮೋಡಿ ಮಾಡಿದ್ದಾರೆ. ಈಗ ನಿರ್ದೇಶನದ ಕ್ಯಾಪ್‌ ಧರಿಸಲು ಸಜ್ಜಾಗಿದ್ದಾರೆ. ಅವರ ನಿರ್ದೇಶನದ (Direction) ಮೊದಲ ಸಿನಿಮಾ ಕೆಲಸದ  ಬಗ್ಗೆ ಅಭಿಮಾನಿಗಳಿಗೆ ಅಪ್‌ಡೇಟ್‌ ನೀಡಿದ್ದಾರೆ. ಇದನ್ನೂ ಓದಿ: ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಫ್ಯಾನ್ಸ್‌ಗೆ ಪತ್ರ ಬರೆದ ನಜ್ರಿಯಾ

ranjani raghavan 1ರಂಜನಿ ಇನ್ಸ್ಟಾಗ್ರಾಂ ಲೈವ್‌ಗೆ ಬಂದು ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೇ ಏ.18ರಂದು ಸಿನಿಮಾ ಪೋಸ್ಟರ್ ಬಿಡುಗಡೆ ಮಾಡೋದಾಗಿ ತಿಳಿಸಿದ್ದಾರೆ. ಅದರಲ್ಲಿ ಚಿತ್ರದ ಟೈಟಲ್, ತಾರಾಗಣ, ತಂತ್ರಜ್ಞರು ಸೇರಿದಂತೆ ಯಾರೆಲ್ಲಾ ಚಿತ್ರತಂಡ ಸೇರಿಕೊಂಡಿದ್ದಾರೆ ಎಂಬುದನ್ನು ಏ.18ರಂದು ಅನಾವರಣ ಮಾಡೋದಾಗಿ ಹೇಳಿದ್ದಾರೆ. ಅವರದ್ದೇ ನಿರ್ದೇಶನದ ಸಿನಿಮಾದಲ್ಲಿ ರಂಜನಿ ನಟಿಸುತ್ತಾರಾ ಎಂಬುದಕ್ಕೆ ಉತ್ತರ ಸಿಗಲಿದೆ. ಇದನ್ನೂ ಓದಿ: ಪೀರಿಯಡ್ಸ್ ಬಗ್ಗೆ ಸಮಂತಾ ಓಪನ್ ಟಾಕ್

ಇಂದಿನ ಕಾಲಮಾನಕ್ಕೆ ಸರಿಹೊಂದುವ ಕೌಟುಂಬಿಕ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜನೆ ಮಾಡುತ್ತಿರೋದು ವಿಶೇಷವಾಗಿದೆ. ಕೆಲ ತಿಂಗಳುಗಳ ಹಿಂದೆ ಇಳಯರಾಜರನ್ನು (Ilayaraja) ರಂಜನಿ ಭೇಟಿ ಮಾಡಿದ್ದಾರೆ. ಈ ವೇಳೆ, ಕಥೆ ಕೇಳಿ ಇಂಪ್ರೆಸ್ ಆಗಿ ಸಂಗೀತ ಸಂಯೋಜನೆ ಮಾಡೋದಾಗಿ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಅಂದಹಾಗೆ, ಸಿನಿಮಾಗೆ ನಿರ್ದೇಶನ ಮಾಡೋದು ರಂಜನಿ ಕನಸು. ಅದಕ್ಕಾಗಿ ಅವರು ಒಂದೂವರೆ ವರ್ಷ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಹಾಗಾದ್ರೆ ನಟಿಯಾಗಿ ಗೆದ್ದ ‘ಕನ್ನಡತಿ’ ರಂಜನಿ ಈಗ ನಿರ್ದೇಶಕಿಯಾಗಿಯೂ ಗೆಲ್ಲುತ್ತಾರಾ ಎಂದು ಕಾದುನೋಡಬೇಕಿದೆ.

Share This Article