ಮಂಗಳೂರು: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ರಾಣಿ ಎಂಬ ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಉದ್ಯಾನದ ಹುಲಿ ಸಂತತಿಯನ್ನು 10ಕ್ಕೆ ಹೆಚ್ಚಿಸಿದೆ.
ಒಂದು ಗಂಡು ಮತ್ತು ಒಂದು ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದು, ಎರಡೂ ಮರಿಗಳು ಆರೋಗ್ಯವಾಗಿವೆ. ರಾಣಿ ಹುಲಿ 2016 ರಲ್ಲಿ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದೆ.
ನಂತರ 2021 ರಲ್ಲಿ ಇನ್ನೂ 3 ಮರಿಗಳಿಗೆ ಜನ್ಮ ನೀಡಿದೆ. ಇದೀಗ ಮತ್ತೆ ಎರಡು ಮರಿಗಳಿಗೆ ಜನ್ಮ ನೀಡಿದ ರಾಣಿ ಒಟ್ಟಾರೆ 10 ಮರಿಗಳ ತಾಯಿಯಾದ್ದಾಳೆ. ಪ್ರಾಣಿ ವಿನಿಮಯ ಕಾರ್ಯಕ್ರಮದ ಅಂಗವಾಗಿ 2016 ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ರಾಣಿಯನ್ನು ಪಿಲಿಕುಳಕ್ಕೆ ಕರೆ ತರಲಾಗಿದ್ದು, ಪ್ರತಿಯಾಗಿ ಪಿಲಿಕುಳದ ಗಂಡು ಹುಲಿಯನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗಿತ್ತು.
ಇದೀಗ ಪಿಲಿಕುಳವು 15 ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿದೆ.