ಮಂಗಳೂರು: ನಗರದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ‘ರಾಣಿ’ ಹುಲಿ 5 ಮರಿಗಳಿಗೆ ಜನ್ಮ ನೀಡಿದೆ. 8 ವರ್ಷದ ರಾಣಿಗೆ 3 ಹೆಣ್ಣು ಹಾಗೂ 2 ಗಂಡು ಮರಿಗಳ ಜನನವಾಗಿದೆ.
ಉದ್ಯಾನವನಗಳಲ್ಲಿ ಹುಲಿಗಳು 2ರಿಂದ 3 ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ರಾಣಿ 5 ಮರಿ ಹಾಕಿರುವುದು ನಿಸರ್ಗಧಾಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಚ್ಚರಿ ಉಂಟುಮಾಡಿದೆ.
Advertisement
ಸದ್ಯ ತಾಯಿ ಹಾಗೂ ಮರಿಗಳನ್ನು ಬೋನಿನಲ್ಲಿಡಲಾಗಿದ್ದು, ಅವುಗಳಿಗೆ ಸೋಂಕು ತಗಲದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇಲ್ಲ. ಎರಡ್ಮೂರು ತಿಂಗಳ ಬಳಿಕ ಮರಿಗಳಿಗೆ ಚುಚ್ಚು ಮದ್ದು, ಲಸಿಕೆ ನೀಡಿ ಆರೋಗ್ಯ ಪರಿಶೀಲಿಸಿ ಬೋನಿನಿಂದ ಹೊರಕ್ಕೆ ಬಿಡಲಾಗುವುದು ಎಂಬುದಾಗಿ ನಿಸರ್ಗಧಾಮ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ರಾಣಿಯನ್ನು 3 ವರ್ಷಗಳ ಹಿಂದೆ ಬೆಂಗಳೂರಿನ ಬನ್ನೇರುಘಟ್ಟದಿಂದ ತರಲಾಗಿತ್ತು. ಇದೀಗ ಮೂರು ವಾರಗಳ ಹಿಂದೆಯಷ್ಟೇ ರಾಣಿಗೆ 5 ಮರಿಗಳು ಜನಿಸಿವೆ.
Advertisement
Karnataka: Rani, the Royal Bengal tigress gave birth to five healthy cubs three weeks ago at Pilikula Biological Park in Mangaluru. pic.twitter.com/exjxu4miJu
— ANI (@ANI) September 1, 2019
Advertisement