ಕುಚ್ ಕುಚ್ ಹೋತಾ ಹೈ, ಸಾಥಿಯಾ, ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ಬಾಲಿವುಡ್ (Bollywood) ನಟಿ ರಾಣಿ ಮುಖರ್ಜಿ ಅವರು `ಬೈಯರ್ ಫೂಲ್’ ಬೆಂಗಾಲಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವೇಳೆಯಲ್ಲಿ ತಾವು ಎದುರಿಸಿದ ಅವಮಾನಗಳ ಬಗ್ಗೆ ಇದೀಗ ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ.
ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗ ನಟಿ ರಾಣಿ ಮುಖರ್ಜಿ (Rani Mukerji) ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಧ್ವನಿಯಿಂದ ಎದುರಿಸಿದ ಟೀಕೆಯ ಬಗ್ಗೆ ಮೌನ ಮುರಿದಿದ್ದಾರೆ.
ವೃತ್ತಿ ಜೀವನದ ಆರಂಭದಲ್ಲಿ ಅನೇಕರು ನನ್ನ ಧ್ವನಿ (Voice)ಬಗ್ಗೆ ನೆಗೆಟಿವ್ (Negative) ಆಗಿ ಮಾತನಾಡಿದ್ದರು. ಅಂದು ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಮುಂದೆ ತುಂಬಾ ಕಷ್ಟವಾಗುತ್ತಿತ್ತು. ಆದರೆ ಇಂದು ಜನರು ನನ್ನನ್ನು ಗುರುತಿಸುವುದೇ ನನ್ನ ಧ್ವನಿಯಿಂದ ಇದು ನನಗೆ ತುಂಬಾ ಖುಷಿ ಕೊಡುತ್ತದೆ. ಇಷ್ಟು ವರ್ಷದ ಜರ್ನಿಯಲ್ಲಿ ನನ್ನ ಧ್ವನಿ ಫೇಮಸ್ ಆಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಒಂದೊಂದು ವೃತ್ತಿ ಜೀವನದಲ್ಲಿ ಒಂದೊಂದು ರೀತಿಯ ಜಾಲೆಂಜ್ ಇರುತ್ತದೆ. ಇದನ್ನೂ ಓದಿ: ಬರ್ತ್‌ಡೇ ಸಂಭ್ರಮದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ಸಣ್ಣ ವಯಸ್ಸಿನ ಹುಡುಗಿ ಇದ್ದಾಗ ನನ್ನ ಆಸೆಗಳು ಬೇರೆ ಆಗಿತ್ತು ನಾಯಕಿ ಆಗುವ ಕನಸು ಕಂಡಿರಲಿಲ್ಲ. ಸಿನಿಮಾ ಕ್ಷೇತ್ರ ಅಂದ್ರೆ ಹೆಚ್ಚಿನ ಪ್ರಮುಖ್ಯತೆ ಮತ್ತು ಗೌರವ ಕೊಡುತ್ತಿರಲಿಲ್ಲ. ನಟನೆಯನ್ನ ವೃತ್ತಿ ಜೀವನವಾಗಿ ಯಾರೂ ನೋಡಿರಲಿಲ್ಲ. ಲಾಯರ್ ಆಗಬೇಕು ಅಥವಾ ಆಗಬೇಕು ಎಂದು ಕನಸು ಕಂಡಿದ್ದೆ. ಸಿನಿಮಾ ಬ್ಯಾಗ್ರೌಂಡ್‌ನಿಂದ ಬಂದರೂ ನನ್ನ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇರಲಿಲ್ಲ ನಾನು ಹುಟ್ಟುವ ಮೊದಲು ನನ್ನ ತಂದೆ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಸಾಮಾನ್ಯ ಕುಟುಂಬದಿಂದ ಬಂದಿರುವ ಹುಡುಗಿ ಆಗಿರುವ ಕಾರಣ ಸಿನಿಮಾ ವಿಚಾರಗಳನ್ನು ಮನೆಯಲ್ಲಿ ಚರ್ಚೆ ಮಾಡುತ್ತಿರಲಿಲ್ಲ. ಅವಕಾಶ ಬಂದಾಗ ಒಂದು ಸಲ ಪ್ರಯತ್ನ ಪಡುಬೇಕು ಎಂದು ತಾಯಿ ಹೇಳಿದ್ದರು ಸಿನಿಮಾ ಕ್ಷೇತ್ರ ಇಷ್ಟವಾಗಿಲ್ಲ ಅಂದ್ರೆ ಓದುವ ಕಡೆ ಗಮನಿಸಬಹುದು ಎನ್ನುತ್ತಿದ್ದರು. ಅದರಂತೆಯೇ ಸಿನಿಮಾದಲ್ಲಿ ನಟಿಸಿಲು ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಂಡೆ ಎಂದು ತಿಳಿಸಿದ್ದರು.