ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ‘ರಂಗಿನ ರಾಟೆ’ (Ranginaa Raate) ಸಿನಿಮಾ ನಿರ್ದೇಶಕ ಸಂತೋಷ್ (Director) ವಿರುದ್ಧ ವಂಚನೆಗೊಳಗಾದ ಯುವತಿಯಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟನೆಗೆ ಚಾನ್ಸ್ ಕೊಡಿಸೋದಾಗಿ ತಮ್ಮಿಂದ ಹಣ ಪಡೆದಿರೋದಾಗಿ ಯುವತಿ ಇದೀಗ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು
ಸಿನಿಮಾರಂಗದಲ್ಲಿ ನಟಿಯಾಗಿ ಬೆಳೆಯಬೇಕು ಎಂದು ಕನಸು ಕಂಡಿದ್ದ ಯುವತಿಗೆ ‘ರಂಗಿನ ರಾಟೆ’ ನಿರ್ದೇಶಕ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ. ಗೂಗಲ್‌ಪೇ, ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ಯುವತಿಗೆ ನಿರ್ದೇಶಕ ಸಂತೋಷ್ ವಂಚಿಸಿದ್ದಾರೆ. ಇದೀಗ ಸ್ಥಳಿಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕಳೆದ ವರ್ಷ ‘ರಂಗಿನ ರಾಟೆ’ ಎಂಬ ಸಿನಿಮಾವನ್ನು ಡೈರೆಕ್ಟರ್ ಸಂತೋಷ್ ನಿರ್ದೇಶಿಸಿದ್ದರು. ನಟ ರಾಜೀವ್ ಮತ್ತು ದುನಿಯಾ ರಶ್ಮಿ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]