ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಐವತ್ತನೇ ದಿನ ಪೂರೈಸಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಟ ರಂಗಾಯಘ ರಘು, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ನೀಡಿದ ಬೆಳ್ಳಿ ಬಟ್ಟಲು ಘಟನೆಯನ್ನು ಹೇಳಿ ಭಾವುಕರಾದರು.
“ಈ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರು ಈ ರೀತಿಯ ಸಮಾರಂಭ ಆಯೋಜಿಸಿ, ಎಲ್ಲರಿಗೂ ಬೆಳ್ಳಿಯ ಲೋಟ ನೀಡುತ್ತಿದ್ದರು. ನನ್ನ ಬಳಿ ಅವರು ನೀಡಿರುವ ಮೂರು ಬೆಳ್ಳಿಯ ಲೋಟಗಳಿವೆ. ಇತ್ತೀಚಿಗೆ ಇಂತಹ ಸಮಾರಂಭ ಕಡಿಮೆಯಾಗಿತ್ತು. ಧನಂಜಯ್ ಮತ್ತೆ ಆರಂಭ ಮಾಡಿದ್ದಾರೆ ಒಳ್ಳೆಯದಾಗಲಿ” ಎಂದರು ರಂಗಾಯಣ ರಘು. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ
ಕೇವಲ ನಟರಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಡಾಲಿ ಧನಂಜಯ, “ಬಡವ ರಾಸ್ಕಲ್” ಚಿತ್ರದಿಂದ ನಿರ್ಮಾಪಕರಾದರು. ಈ ಸಂಭ್ರಮಕ್ಕಾಗಿ ಅವರು ಈ ಸಿನಿಮಾದಲ್ಲಿ ದುಡಿದ ಕಾರ್ಮಿಕರು, ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ಸ್ನೇಹಿತರು ಹೀಗೆ ಸುಮಾರು 220 ಕ್ಕೂ ಅಧಿಕ ಜನರಿಗೆ ಸ್ಮರಣಿಕೆ ಹಾಗೂ ಬೆಳ್ಳಿನಾಣ್ಯ ನೀಡಿ ಸತ್ಕರಿಸಿದರು. ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು
ಈ ಸಂದರ್ಭದಲ್ಲಿ ಮಾತನಾಡಿದ ಧನಂಜಯ್, “ನಾನು ಈ ಸಿನಿಮಾವನ್ನು ಹಳೆಯ ನಿರ್ಮಾಪಕರಿಂದ ಪಡೆದುಕೊಳ್ಳಲು ಸ್ವಲ್ಪ ಹೆಚ್ಚಿನ ಹಣ ಬೇಕಿತ್ತು. ಸುಮ್ಮನೆ ಕೆಲವು ಸ್ನೇಹಿತರಿಗೆ ಫೋನ್ ಮಾಡಿದೆ. ಎಲ್ಲರೂ ಏನು ಅಪೇಕ್ಷೆ ಇಲ್ಲದೆ ಸಹಾಯ ಮಾಡಿದ್ದಾರೆ. ಇನ್ನೂ ನಾನು ಹಿಂದಿರುಗಿಸಿಲ್ಲ. ಸದ್ಯದಲ್ಲೇ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯಿದೆ” ಎಂದರು. ಇದನ್ನೂ ಓದಿ : ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು
ಈ ಸಮಾರಂಭಕ್ಕೆ ವಸಿಷ್ಠ ಸಿಂಹ ಅತಿಥಿಯಾಗಿ ಆಗಮಿಸಿದ್ದರೆ, ನಿರ್ದೇಶಕ ಶಂಕರ್ ಗುರು, ನಾಯಕಿ ಅಮೃತ ಅಯ್ಯಂಗಾರ್, ನಟ ನಾಗಭೂಷಣ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮುಂತಾದ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಿರ್ಮಾಪಕರಾದ ಕರಿಸುಬ್ಬು, ಸುಧೀಂದ್ರ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಮುಂತಾದ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಅಂದಹಾಗೆ ಈ ಚಿತ್ರ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ ಎನ್ನುವುದು ವಿಶೇಷ.